Home Advertisement
Home ಸಿನಿ ಮಿಲ್ಸ್ 80 ವರ್ಷ, 12,000 ಹಾಡುಗಳು; ಬಾರದ ಲೋಕಕ್ಕೆ ‘ರಂಗೀಲಾ’ ಗಾಯಕಿ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?

80 ವರ್ಷ, 12,000 ಹಾಡುಗಳು; ಬಾರದ ಲೋಕಕ್ಕೆ ‘ರಂಗೀಲಾ’ ಗಾಯಕಿ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?

0
87

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಂಸ್ಲೆ. ಆಶಾ ಭೋಂಸ್ಲೆ ಅವರು, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಶಾ ಅವರ ಅಗಲಿಕೆ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಪಿಯಾ ತು ಅಬ್ ತೊ ಆಜಾ.. ಕಜ್ರಾ ಮೊಹಬ್ಬತ್ ವಾಲಾ.. ರಂಗೀಲಾ ರೇ ಮತ್ತು ದಿಲ್ ಚೀಜ್ ಕ್ಯಾ ಹೈ ಹಾಡು ಅಂದ್ರೆ ಆಶಾ ಭೋಸ್ಲೆ ನೆನಪಾಗುತ್ತೆ. ಆಶಾ ಭೋಸ್ಲೆ ಸೆಪ್ಟೆಂಬರ್ 8ರಂದು 93ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ಅವರ ನಿಧನ ಸಂಗೀತ ಪ್ರೇಮಿಗಳಿಗೆ ಆಘಾತವನ್ನ ಉಂಟು ಮಾಡಿದೆ.

ಮೆಲೋಡಿ ರಾಣಿ ಲತಾ ಮಂಗೇಶ್ಕರ್ ಅವರ ತಂಗಿ ಆಶಾ ಭೋಸ್ಲೆ. ಆಶಾ ತಮ್ಮದೇ ಆದ ರೀತಿಯಲ್ಲಿ ಹೊಸ ಛಾಪು ಮೂಡಿಸಿದ್ದ ಪ್ರತಿಭೆ. ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಗಾಯಕಿ ಉಷಾ ಮಂಗೇಶ್ಕರ್ ಮೂವರು ಸಹೋದರಿಯರು. ಇವರು ಪೌರಾಣಿಕ ಮಂಗೇಶ್ಕರ್ ಕುಟುಂಬದಲ್ಲಿ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಶೇವಂತಿ ಮಂಗೇಶ್ಕರ್ ದಂಪತಿ ಮಕ್ಕಳು. ದೀನನಾಥ್‌ ಮಂಗೇಶ್ಕರ್‌ ಅವರಿಗೆ ಲತಾ, ಮೀನಾ, ಆಶಾ, ಉಷಾ ಮತ್ತು ಹೃದಯನಾಥ್ ಐವರು ಮಕ್ಕಳು.

ತಮ್ಮ ಅದ್ಭುತ ಗಾಯನದ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿರುವ ಆಶಾ ಭೋಂಸ್ಲೆ ಅವರ ಧ್ವನಿ ಎಂದೆಂದಿಗೂ ಅಮರವಾಗಿರುತ್ತದೆ. ಸಂಗೀತವೇ ಉಸಿರಾಗಿರುವ ಅವರ ಬದುಕು ಮುಂಬರುವ ಪೀಳಿಗೆಗೆ ಒಂದು ಮಹಾನ್ ಪುಸ್ತಕ. ಅವರ ಧ್ವನಿ ನಮ್ಮ ಕಿವಿಯಲ್ಲಿ ಸದಾ ನಿರಂತರವಾಗಿ ಪ್ರತಿಧ್ವನಿಸುತ್ತಲೇ ಇರುತ್ತದೆ.