ಬೆಂಗಳೂರು: 5 ತಿಂಗಳ ಹಿಂದೆ ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮದ (ALIMCO) ಮತ್ತು ನಮ್ಮ ಹುಬ್ಬಳ್ಳಿಯ KMCನಲ್ಲಿಯ Research Instituteನ (KMCRI) ಸಹಯೋಗದೊಂದಿಗೆ ‘ಪ್ರಧಾನ ಮಂತ್ರಿ ದಿವ್ಯಶಾ ಕೇಂದ್ರದ (PMDK) ಶಾಖೆಯು KMCಯ ಆವರಣದಲ್ಲಿ ಆರಂಭವಾಗಿತ್ತು. ಈ ಐದು ತಿಂಗಳಲ್ಲಿ ಈ ಶಾಖೆಯು ಒಂದು ಕೋಟಿಗೂ ಅಧಿಕ ಮೌಲ್ಯದ ಸಾಧನ ಸಲಕರಣೆಗಳನ್ನು ದಿವ್ಯಾಂಗರು ಹಾಗೂ ಹಿರಿಯ ನಾಗರಿಕರಿಗೆ ವಿತರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ‘ಪ್ರಧಾನ ಮಂತ್ರಿ ದಿವ್ಯಶಾ ಕೇಂದ್ರದ ಕೇಂದ್ರವು ವಿಕಲಾಂಗ ವ್ಯಕ್ತಿಗಳನ್ನು ಸಬಲಿಕರಣಗೊಳಿಸುವ ಗುರಿಯನ್ನು ಹೊಂದಿದ್ದು ದಿವ್ಯಾಂಗರ ಜೀವನದ ಗುಣಮಟ್ಟ ಮತ್ತು ಅವಕಾಶಗಳನ್ನು ಹೆಚ್ಚಿಸಲು ನಿರ್ಣಾಯಕ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ.
ನಮ್ಮ ಬಹುದಿನದ ಆಶೆಯಾಗಿದ್ದ ದಿವ್ಯಾಂಗರ ಜೀವನದ ದಿನ ನಿತ್ಯದ ಅವಶ್ಯಕತೆಗಳಿಗೆ ಸ್ಪಂದಿಸುವ ಒಂದು ಕೇಂದ್ರ ಇಂದು ನಮ್ಮ ಕ್ಷೇತ್ರದಲ್ಲಿ ಸ್ಥಾಪನೆಯಾಗಿ ಇಂದು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿರುವದು ಅತ್ಯಂತ ಸಂತೋಷದ ವಿಷಯ. ನಮ್ಮ ಭಾಗದ ಜನರಿಗೆ ಅತಿ ಅವಶ್ಯಕವಾಗಿದ್ದ ಈ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಅನಂತ ಧನ್ಯವಾದಗಳು ಎಂದಿದ್ದಾರೆ.