ಸಂಪ್ರದಾಯದಂತೆ ಶಾಲೆಯಲ್ಲಿ ಗಣೇಶೋತ್ಸವ

0
23
ಬಿ.ಸಿ. ನಾಗೇಶ್

ಶಾಲೆಯಲ್ಲಿ ನಮಾಜ್‌ ಮಾಡುವ ಹಕ್ಕನ್ನು ಸರ್ಕಾರ ಕೊಟ್ಟಿಲ್ಲ. ಆದರೆ. ಗಣೇಶೋತ್ಸವ ಹಿಂದಿನಿಂದಲೂ ಸಂಪ್ರದಾಯದಂತೆ ನಡೆದು ಬಂದಿದೆ. ಹೀಗಾಗಿ ಸಂಪ್ರದಾಯದಂತೆ ನಡೆಯುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ಹೊಸದಾಗಿ ಆಚರಿಸಿ ಅಥವಾ ಆಚರಿಸಬೇಡಿ ಎಂಬಂಥ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ನಮ್ಮ ಬಿಜೆಪಿ ಸರ್ಕಾರ ಬರುವುದಕ್ಕೂ ಮೊದಲಿನಿಂದಲೂ ಇದು ಹಾಸುಹೊಕ್ಕಾಗಿದೆ. ಅಲ್ಲದೇ ಈ ಹಬ್ಬವನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟದ ಅಸ್ತ್ರವಾಗಿ ರೂಪಿಸಲಾಗಿತ್ತು. ಈ ಸಂಪ್ರದಾಯ ಶಾಲಾ ಕಾಲೇಜು, ಹಾಸ್ಟೆಲ್‌ಗಳಲ್ಲಿ ನಡೆದುಕೊಂಡು ಬಂದಿದೆ ಎಂದರು.

ಬಿ.ಸಿ. ನಾಗೇಶ್
Previous article‘ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದಾಗ ಕೋಪ ಬರುವುದಿಲ್ಲವೇ?’
Next article22ರೊಳಗಾಗಿ ಮೀಸಲಾತಿ ಘೋಷಿಸದಿದ್ದರೆ ಧರಣಿ