ಸಂಕ ಕಲಬುರಗಿ ಆವೃತ್ತಿಗೆ ರಜತ ಸಂಭ್ರಮ: ಕಲ್ಯಾಣ ಸಿರಿಗೆ ಗಣ್ಯರಿಂದ ವಿದ್ಯುಕ್ತ ಚಾಲನೆ

0
47

ಕಲಬುರಗಿ: ಕನ್ನಡ ಪತ್ರಿಕೋದ್ಯಮದ ಹಿರಿಯಣ್ಣ ಸಂಯುಕ್ತ ಕರ್ನಾಟಕ ಪತ್ರಿಕೆಯ ಕಲಬುರಗಿ ಆವೃತ್ತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಕಲ್ಯಾಣ ಸಿರಿ ಕಾರ್ಯಕ್ರಮಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ಸಿಕ್ಕಿತು.

ಹೊಸ ಜೇವರ್ಗಿ ರಸ್ತೆಯ ಖಮಿತಕರ ಭವನದಲ್ಲಿ ಏರ್ಪಡಿಸಿರುವ ಕಲ್ಯಾಣ ಸಿರಿ ಉತ್ಸವಕ್ಕೆ ಪದ್ಮಶ್ರೀ ವಿಜಯಲಕ್ಷ್ಮೀ ದೇಶಮಾನೆ ಚಾಲನೆ ನೀಡಿದರು. ಅವರಿಗೆ ಗಣ್ಯರು ಸಾಥ್ ನೀಡಿದರು.

ಕಲ್ಯಾಣ ಸಿರಿ ಕಾರ್ಯಕ್ರಮದ ಭಾಗವಾಗಿ ವಿಶೇಷ ಪ್ರದರ್ಶನಿ ಜರುಗುತ್ತಿದ್ದು, ಪಾರಂಪರಿಕ ವೈದ್ಯರು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು,‌ ಪುಸ್ತಕ ಮಾರಾಟ,ಆಹಾರದ ಮಳಿಗೆಗಳು ಪ್ರದರ್ಶನಿಯಲ್ಲಿ ಲಭ್ಯವಿವೆ.

ಸಂಯುಕ್ತ ಕರ್ನಾಟಕದ ಕಲಬುರಗಿ ಆವೃತ್ತಿಯ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಂಸ್ಕೃತಿ ಕಟ್ಟಿಕೊಡುವ ರೀತಿಯಲ್ಲಿ ಅತ್ಯಂತ ವೈಭವಯುತವಾಗಿ ಕಾರ್ಯಕ್ರಮ ಏರ್ಪಿಡಿಸಿದ್ದು, ಸಂಸ್ಥೆಯ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಉದ್ಘಾಟನೆ ಸಂದರ್ಭದಲ್ಲಿ ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ‌‌ ಹಾರನಹಳ್ಳಿ, ಟ್ರಸ್ಟಿಗಳಾದ ಯು.ಬಿ.ವೆಂಕಟೇಶ್, ಗುರುರಾಜ ಕರಜಗಿ, ಡಿ.ಆರ್.ಪಾಟೀಲ, ಬಿಜೆಪಿ ಮುಖಂಡೆ ಜಯಶ್ರೀ ಮತ್ತಿಮಡು, ಸಂಯುಕ್ತ ಕರ್ನಾಟಕದ ಸಂಪಾದಕೀಯ ಸಲಹೆಗಾರ ಹುಣಸವಾಡಿ ರಾಜನ್, ಸಂಪಾದಕ ಮಹಾಬಲ ಸೀತಾಳಬಾವಿ, ಸಿಇಒ ಮತ್ತು ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ, ಲೋಕಶಿಕ್ಷಣ ಟ್ರಸ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎನ್.ಹೆಗಡೆ, ಲೋಕಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಹರಿಚನ್ನಕೇಶವ, ಮತ್ತಿತರರು ಇದ್ದರು.

Previous articleವಿಮಾನ ದುರಂತ ಸ್ಥಳಕ್ಕೆ ನರೇಂದ್ರ ಮೋದಿ ಭೇಟಿ
Next articleನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಹೃದಯಾಘಾತದಿಂದ ನಿಧನ