ಗದಗ: ಬಿಡಾಡಿ ದನಗಳು ಗುದ್ದಾಡುತ್ತಿರುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ಗುದ್ದಿ, ವೃದ್ಧ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೆಟಗೇರಿ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವೃದ್ಧ ಬಲಿಯಾಗಿದ್ದು, ಮೃತನ್ನು ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶಂಕರಪ್ಪ ಹೊಳಿ (70) ಎಂದು ಗರಿತಸಾಗಿದೆ. ಬೆಟಗೇರಿಯ ಸರಕಾರಿ ಪ್ರಾಥಮಿಕ ಶಾಲೆ ನಂಬರ್ 7ರ ಹತ್ತಿದ ಬಿಡಾಡಿ ಗೂಳಿ ಇತರೆ ದನಗಳೊಂದಿಗೆ ಗುದ್ದಾಡುತ್ತಿರುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ರಭಸವಾಗಿ ಗುದ್ದಿರುವ ಪರಿಣಾಮ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.