ಕಲುಷಿತ ನೀರು ಸೇವನೆ: ಮಹಿಳೆ ಬಲಿ

0
25

ಹೊಸಪೇಟೆ: ನಗರದ ಕಾರಿಗನೂರು ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ ವಾಂತಿಬೇಧಿಗೆ ಮಹಿಳೆಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.
ಕಾರಿಗನೂರಿನ ಆರ್ ಬಿಎಸ್ ಎಸ್ ಎನ್ ಕ್ಯಾಂಪ್ ನ ನಿವಾಸಿ ಸೀತಮ್ಮ (66) ಮೃತಪಟ್ಟ ಮಹಿಳೆ. ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಮೊದಲಿಗೆ ಚಿಕಿತ್ಸೆ ಪಡೆದಿದ್ದರು. ಬಳಿಕ ಬಳ್ಳಾರಿ ವಿಮ್ಸ್ ನಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾರಿಗನೂರು ಶಿಕಾರಿ ಕ್ಯಾಂಪ್, ಆರ್ ಬಿಎಸ್ ಎಸ್ ನ ಕ್ಯಾಂಪ್, ಕೊಟ್ಟೂರೇಶ್ವರ ನಗರ ಮತ್ತು ಹಂಪಿನಕಟ್ಟೆ ಪ್ರದೇಶದಲ್ಲಿ ೨೭ ವಾಂತಿಭೇದಿ ಪ್ರಕರಣಗಳು ಕಂಡು ಬಂದಿವೆ. ಕಲುಷಿತ ನೀರು ಸರಬರಾಜಿನಿಂದ ಈ ಸಮಸ್ಯೆ ಉಂಟಾಗಿತ್ತು. ಈ ಹಿಂದೆ ನಗರದ ರಾಣಿ ಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈಗ ಕಾರಿಗನೂರಿನಲ್ಲಿ ಮಹಿಳೆ ಮೃತಪಟ್ಟಿದ್ದು, ಆದರೂ ನಗರಸಭೆ ಎಚ್ಚೆತ್ತುಕೊಳ್ಳದೇ ಇರುವುದಕ್ಕೆ ನಗರದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Previous articleಬಸವತತ್ವಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ
Next articleಉಳ್ಳವರಿಗೆ ಉಚಿತ ಕೊಡುಗೆ ಬೇಕೆ?