`ಲಕ್ಷ ಲಕ್ಷ ಪೀಕಿ ಐಫೋನ್ ಕದ್ದಳು’

0
31

ಘಜಿಯಾಬಾದ್: ಕಳೆದ ೩-೪ ವರ್ಷಗಳಿಂದ ಪ್ರೀತಿಸಿ, ಮದುವೆಯಾಗಿ ವಂಚಿಸಿರುವುದಾಗಿ ಕ್ರಿಕೆಟರ್ ಯಶ್ ದಯಾಳ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ ಯುವತಿ ವಿರುದ್ಧ ಆರ್‌ಸಿಬಿ ಆಟಗಾರ ಕೆಂಡಾಮಂಡಲವಾಗಿದ್ದಾರೆ. ಎಫ್‌ಐಆರ್ ದಾಖಲಾದ ಮರುದಿನವೇ ಯಶ್ ದಯಾಳ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತನ್ನಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವುದಾಗಿ ತಿರುಗೇಟು ನೀಡಿದ್ದಾರೆ. ಇದರಿಂದ ಪ್ರಕರಣ ಈಗ ಗಂಭೀರತೆ ಪಡೆದುಕೊಂಡಿದೆ.
ಮದುವೆಯ ನೆಪದಲ್ಲಿ ‘ಲೈಂಗಿಕ ಶೋಷಣೆ’ ಆರೋಪದ ಮೇಲೆ ಯಶ್ ದಯಾಳ್ ವಿರುದ್ಧ ಯುವತಿ ದೂರು ನೀಡಿದ್ದಳು. ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ದಯಾಳ್, ಈ ವಿಷಯದ ಬಗ್ಗೆ ಮೌನ ಮುರಿದಿದ್ದು, ಯುವತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪ್ರಯಾಗ್‌ರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ದೂರಿನಲ್ಲಿ ಯುವತಿ ತನ್ನ ಐಫೋನ್ ಮತ್ತು ಲ್ಯಾಪ್‌ಟಾಪ್ ಕದ್ದಿದ್ದಾರೆ ಎಂದು ಯಶ್ ಆರೋಪಿಸಿದ್ದಾರೆ.
ಸಂಪೂರ್ಣ ವಿವರಣೆ ನೀಡಿರುವ ಎಡಗೈ ವೇಗಿ ಯಶ್ ದಯಾಳ್ ೨೦೨೧ ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಿತಗೊಂಡ ಯುವತಿ. ಪರಸ್ಪರ ಸಂಪರ್ಕದಲ್ಲಿದ್ದೆವು. ಈ ವೇಳೆತನಗೆ ಮತ್ತು ತನ್ನ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಸಾಲ ಪಡೆದಿದ್ದು, ಹಿಂದಿರುಗಿಸಿಲ್ಲ. ಶಾಪಿಂಗ್‌ಗಾಗಿಯೂ ಸಾಕಷ್ಟು ಹಣ ಪಡೆದಿದ್ದು, ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು ತನ್ನ ಬಳಿಯಿವೆ’ ಎಂದು ಕ್ರಿಕೆಟಿಗ ಹೇಳಿಕೊಂಡಿದ್ದಾರೆ.
ಘಾಜಿಯಾಬಾದ್ ಪೊಲೀಸರಿಗೆ ಯುವತಿ ತನ್ನ ವಿರುದ್ಧ ದೂರು ನೀಡಿದ್ದಾಳೆಂದು ತಿಳಿದಾಗ, ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದು ದಯಾಳ್ ಹೇಳಿದ್ದು, ಮೂರು ಪುಟಗಳ ದೂರಿನಲ್ಲಿ, ಯಶ್ ದಯಾಳ್ ಯುವತಿ ಮತ್ತು ಆಕೆಯ ಕುಟುಂಬದ ಇಬ್ಬರು ಸದಸ್ಯರು ಮತ್ತು ಇತರ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

Previous articleಕರ್ನಾಟಕ: ಕೆಲವು ಮಂತ್ರಿಗಳ ಕುರ್ಚಿಗೆ ಕಂಟಕ?
Next articleSN Subba Reddy: ಸಿಎಂ, ಡಿಸಿಎಂ ದೆಹಲಿಯಲ್ಲಿ: ಬೆಂಗಳೂರಲ್ಲಿ ಕಾಂಗ್ರೆಸ್‌ ಶಾಸಕನ ಮನೆ ಮೇಲೆ ಇಡಿ ದಾಳಿ