ಬಾವನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ

0
9

ಯಾದಗಿರಿ: ಅಪ್ರಾಪ್ತ ಬಾಲಕಿಯೊಬ್ಬಳು ಬಾವನಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂಬಂಧದಲ್ಲಿ ಬಾಲಕಿ ಕಾಮುಕನ ಪತ್ನಿಯ ತಂಗಿಯಾಗಿದ್ದಾಳೆ. ಸಂತ್ರಸ್ತ ಅಪ್ರಾಪ್ತೆ ಈಗ ಯಾದಗಿರಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆಕೆಯ ಆರೋಗ್ಯ ತಪಾಸಣೆ ವೇಳೆ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ವೈದ್ಯರಿಂದ ತಕ್ಷಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದ್ದು, ಆರೋಪಿ ಬಾವ ಈಗ ನಾಪತ್ತೆಯಾಗಿದ್ದು, ಅವನನ್ನು ಬಂಧಿಸಲು ಕೆಂಭಾವಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಕೋಸಂಬೆ ಮಾತನಾಡಿ, “ಯಾದಗಿರಿ ಜಿಲ್ಲೆಯಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಇದೊಂದು ಅತ್ಯಂತ ಗಂಭೀರ ವಿಚಾರ. ಘಟನೆ ನಡೆದರೂ ದೀರ್ಘಕಾಲ ಪ್ರಕರಣ ದಾಖಲಾಗದೇ ಇರುವುದು ದುರ್ದೈವ. ತಕ್ಷಣ ಪ್ರಕರಣ ದಾಖಲಿಸಿ, ಸಂತ್ರಸ್ತ ಅಪ್ರಾಪ್ತೆಗೆ ಸಂಪೂರ್ಣ ರಕ್ಷಣೆ ಮತ್ತು ಚಿಕಿತ್ಸೆ ಒದಗಿಸಬೇಕು” ಎಂದಿದ್ದಾರೆ.

Previous articleಬಿಜೆಪಿ ನಾಯಕತ್ವ ಬದಲಾವಣೆಯಾಗಲೇಬೇಕು
Next articleಸ್ವಾಮೀಜಿಗೆ ಧಾರವಾಡ ಪ್ರವೇಶ ನಿರ್ಬಂಧ: ಆದೇಶ ಕಾಯ್ದಿರಿಸಿದ ಹೈಕೋರ್ಟ್

LEAVE A REPLY

Please enter your comment!
Please enter your name here