Home Advertisement
Home ನಮ್ಮ ಜಿಲ್ಲೆ ಯಾದಗಿರಿ ರಾಮನವಮಿ: ತೊಟ್ಟಿಲೋತ್ಸವ ಸಂಭ್ರಮ

ರಾಮನವಮಿ: ತೊಟ್ಟಿಲೋತ್ಸವ ಸಂಭ್ರಮ

0
13

ಯಾದಗಿರಿ: ರಾಮನವಮಿ ಹಿನ್ನೆಲೆಯಲ್ಲಿ ನಗರದ ಬಾಲಜಿ ಮಂದಿರದಲ್ಲಿ ಗುರುವಾರ ಭಕ್ತಿ ಸಡಗರದಿಂದ ರಾಮನವಮಿ ಆಚರಿಸಲಾಯಿತು.

ಮಹಿಳೆಯರು, ಮಕ್ಕಳು ಹಾಗೂ ಯುವಕರು ಸೇರಿ ಬಾಲ ರಾಮನಿಗೆ ತೊಟ್ಟಿಲೋತ್ಸವ ನೆರವೇರಿಸಿದರು. ರಾಮನವಮಿ ಶುಭ ಮುಂಜಾನೆ ಪುಷ್ಪಾರ್ಚನೆ, ಪುಷ್ಪಾಂಜಲಿ ಸಲ್ಲಿಸಿದ ಮಹಿಳೆಯರು ಅನೇಕ ರಾಮ ನಾಮಗಳ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ರಾಮನ ತೊಟ್ಟಿಲೋತ್ಸವ ಮಾಡಿದರು.

‘ರಾಮ ರಾಮ’ ಎಂದು ಜಪಿಸುತ್ತಾ ಮಹಿಳೆಯರು, ಮಕ್ಕಳು ಹಾಗೂ ಯುವಕರು ಬಾಲಾಜಿ ಮಂದಿರದಲ್ಲಿ ರಾಮ ಜಪ ಮಾಡಿದರು. ಆರತಿ, ನೈವೇದ್ಯ ನೆರವೇರಿಸಿದರು. ನೈವೇದ್ಯಯಲ್ಲಿ ಶೀರ್ಖಂಡ, ಪಂಚಾಮೃತ, ಹಣ್ಣುಗಳು ಇರಿಸಲಾಗಿತ್ತು. ಪ್ರತಿ ಮಹಿಳೆಯರು ಭಕ್ತಿಪೂರ್ವಕವಾಗಿ ರಾಮ ನಾಮ ಗೀತೆಗಳ ಹಾಡಿ, ಆರತಿ ಬೆಳಗಿದರು. ನೆರೆದ ಭಕ್ತರು ಕೈ ಕೈ ಸೇರಿಸಿ ರಾಮ ನಾಮ‌ ಜಪಿಸಿದರು.