ವಿಜಯಪುರ: ತಾಲೂಕಿನ ಗೌಡಗೆರೆ ಹಳ್ಳಿಯಲ್ಲಿ ಎದುರು-ಬದುರು ನಿಂತು ಕಾಳಗ ಮಾಡುವ ಮದಗಜಗಳ ಅಪರೂಪದ ಉಬ್ಬು ಶಿಲ್ಪ ಪತ್ತೆಯಾಗಿದ್ದು, ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಕಾರ್ಯದಲ್ಲಿ ಉಬ್ಬು ಶಿಲ್ಪವನ್ನು ಸಂಶೋಧಿಸಲಾಗಿದೆ ಎಂದು ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಲಾಯಪ್ಪ ಇಂಗಳೆ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಶಿಲ್ಪ ಪತ್ತೆಯಾಗಿದ್ದು, ಇದನ್ನು ದೇವಗಿರಿ ಯಾದವರು ಎಂದು ಹೆಸರುವಾಸಿಯಾದ ಸೇವುಣರ ರಾಜಧಾನಿ ಗೌಡಗೆರೆ ಹಳ್ಳಿಗೆ ಸೇರಿದ ಕೋಟೆಯಲ್ಲಿ ಕೆತ್ತಲಾದ ಮದಗಜಗಳ ಉಬ್ಬು ಶಿಲ್ಪವು ರಾಜಧಾನಿ ರಕ್ಷಣೆಗೆ ಶಕ್ತಿಶಾಲಿ ಗಜಪಡೆ, ಮತ್ತು ರಕ್ಷಣಾ ವ್ಯವಸ್ಥೆ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಕುಬಕಡ್ಡಿ, ಉಮೇಶ ಶಿವಶರಣ, ಭೀಮರಾಯ ಕುಂಟೋಜಿ, ಪ್ರಶಾಂತಗೌಡ ಪಾಟೀಲ ಉಪಸ್ಥಿತರಿದ್ದರು.























