ಕನಸಿಗೆ ರೆಕ್ಕೆ: ಸಚಿವರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು

0
66

ವಿಜಯಪುರ: ಆರ್ಥಿಕ ಅಡಚಣೆಯಿಂದ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ 6 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಜೀವನಾಡಿಯಾಗಿದ್ದಾರೆ.

ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರೂ, ಸರ್ಕಾರಿ ಕೋಟಾದಡಿ ಪಡೆದಿದ್ದ MBBS ಸೀಟುಗಳನ್ನು ಉಳಿಸಿಕೊಳ್ಳಲು ಅಗತ್ಯವಿದ್ದ ಆರ್ಥಿಕ ನೆರವು ದೊರೆಯದೆ ವಿದ್ಯಾರ್ಥಿಗಳು ಕಳವಳದಲ್ಲಿದ್ದರು. ಈ ವಿಚಾರ ತಿಳಿದ ಪಾಟೀಲ್ ಅವರು, ತಮ್ಮ ಕಚೇರಿಯ ಮೂಲಕ ಒಟ್ಟು ₹10,21,380 ಮೌಲ್ಯದ ಸಹಾಯಧನ ವಿತರಣೆ ಮಾಡಿ ವಿದ್ಯಾರ್ಥಿಗಳ ಕನಸಿಗೆ ನಿಜವಾದ ರೆಕ್ಕೆ ನೀಡಿದ್ದಾರೆ.

ಕೋರ್ಸಿನ ಮೊದಲ ವರ್ಷದ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ ಹಾಗೂ ಊಟದ ವೆಚ್ಚಕ್ಕೆ ಅಗತ್ಯವಾಗಿರುವ ಈ ನೆರವು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಎಂ.ಬಿ. ಪಾಟೀಲ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದು “ನೀವು ಉತ್ತಮ ಅಂಕಗಳೊಂದಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಸಮಾಜಕ್ಕೆ ಆದರ್ಶ ವೈದ್ಯರಾಗಿ ಸೇವೆ ಸಲ್ಲಿಸಬೇಕು,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಎಲ್ಡಿಇ ಸಂಸ್ಥೆಯ ಮುಖ್ಯ ಸಲಹೆಗಾರ ಹಾಗೂ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Previous articleಆಸ್ಟ್ರೇಲಿಯಾ ಮಣಿಸಿದ ಟೀಂ ಇಂಡಿಯಾ — 5 ವಿಕೆಟ್‌ಗಳ ಭರ್ಜರಿ ಗೆಲುವು!
Next articleಸಿದ್ಧರಾಮಯ್ಯ ಒಡೆಯಲು ಧರ್ಮವೇನು ಮಡಕೆಯಲ್ಲ: ಮಾತೆ ಗಂಗಾದೇವಿ

LEAVE A REPLY

Please enter your comment!
Please enter your name here