Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಶಿರಸಿಯ ಈ ಯುವಕ 25ನೇ ವಯಸ್ಸಿನಲ್ಲೇ ನ್ಯಾಯಾಧೀಶ!

ಶಿರಸಿಯ ಈ ಯುವಕ 25ನೇ ವಯಸ್ಸಿನಲ್ಲೇ ನ್ಯಾಯಾಧೀಶ!

0
59346

ಉತ್ತರ ಕನ್ನಡ: ಸಿವಿಲ್‌ ಜಡ್ಜ್ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆಯುವ ಮೂಲಕ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಸುಮಂತ್ ಮಂಜುನಾಥ್ ನಾಯ್ಕ್ ತಮ್ಮ ಮೊದಲ ಪ್ರಯತ್ನದಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಡಿಸೆಂಬರ್‌ನಲ್ಲಿ ಅಂತಿಮ ಪರೀಕ್ಷೆ ನಡೆದಿದ್ದು, ಜನವರಿಯಲ್ಲಿ ಸಂದರ್ಶನ ನಡೆಸಲಾಗಿತ್ತು. ಸದ್ಯ ಕರ್ನಾಟಕ ಹೈಕೋರ್ಟ್ 83 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದ್ದು ಸುಮಂತ್ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದಿದ್ದಾರೆ.

ಇದನ್ನೂ ಓದಿ: ದಾಂಡೇಲಿ ಸುತ್ತಮುತ್ತ ಒಂಟಿ ಸಲಗ ಉಪಟಳ: ರಸ್ತೆಗಳಲ್ಲಿ ಭೀತಿ

ಬೆಂಗಳೂರು ಲೋಕಾಯುಕ್ತದ ಸರ್ಕಾರಿ ಅಭಿಯೋಜಕರಾದ ಮಂಜುನಾಥ್ ನಾಯ್ಕ್ ಹಾಗೂ ವಕೀಲೆ ಸುಜಾತಾ ನಾಯ್ಕ್ ದಂಪತಿಯ ಪುತ್ರ ಸುಮಂತ್‌ ಪಠ್ಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.