ಮುಖ್ಯಮಂತ್ರಿಗಳಿಗೆ ಆಯೋಗದ 9ನೇ ವರದಿ ಸಲ್ಲಿಸಿದ ಆರ್.ವಿ. ದೇಶಪಾಂಡೆ

0
27

ದಾಂಡೇಲಿ : ಮಾಜಿ ಸಚಿವರು ಹಾಗೂ ಹಳಿಯಾಳ ಶಾಸಕರು, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಆಯೋಗದ 9 ನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.

ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಲು ಸಮಗ್ರ ಕ್ರಮಗಳನ್ನು ಶಿಫಾರಸು ಮಾಡಲು ಆಯೋಗವು ಕಾರ್ಯನಿರ್ವಹಿಸುತ್ತಿದೆ. 2024ರಲ್ಲಿ ಅಧಿಕಾರವಹಿಸಿಕೊಂಡ ದೇಶಪಾಂಡೆ ಅವರು ಹಿಂದಿನ ಏಳು ವರದಿಗಳ ಶಿಫಾರಸುಗಳ ಅನುಷ್ಠಾನವನ್ನು ಶೀಘ್ರಗೊಳಿಸಲು ಹಾಗೂ ಮಾರ್ಗದರ್ಶನದ ಜವಾಬ್ದಾರಿ ಹೊತ್ತು ಆರಂಭದಲ್ಲಿ 5039 ಶಿಫಾರಸುಗಳ ಪೈಕಿ ಕೇವಲ 99 ಶಿಫಾರಸುಗಳನ್ನು ಮಾತ್ರ ಅನುಷ್ಠಾನಗೊಳಿಸಿದ್ದು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆದ್ಯತೆ ನೀಡಿ ಎಲ್ಲಾ 42 ಇಲಾಖೆಗಳ ಪ್ರಗತಿ ಪರಿಶೀಲಿಸಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕಾಲಮಿತಿ ನಿಗಧಿಪಡಿಸಲಾಯಿತು.

ಸಂಬಂದಿಸಿದ ಸಚಿವರನ್ನು ಸಂಪರ್ಕಿಸಿ, ಶಿಫಾರಸುಗಳ ಅನುಷ್ಠಾನ ತೀವ್ರಗೊಳಿಸಲು ಸೂಚಿಸಲಾಗಿ ಕಳೆದ ವರ್ಷ 1500 ಶಿಫಾರಸುಗಳನ್ನು ಜಾರಿಗೆ ತರುವಲ್ಲಿ ಆಯೋಗದ ಅಧ್ಯಕ್ಷರಿಗೆ ಸಾಧ್ಯವಾಯಿತು. 2024ರಲ್ಲಿ ಆಯೋಗದ ಅಧ್ಯಕ್ಷರು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಇಲಾಖೆ ಮತ್ತು ನಾಗರಿಕರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಸ್ವೀಕರಿಸಿದ ಸಮಸ್ಯೆಗಳು ಮತ್ತು ಸಲಹೆಗಳ ಆಧಾರದ ಮೇಲೆ 180 ಹೊಸ ಶಿಫಾರಸುಗಳನ್ನು ಮಾಡಿ ಅವುಗಳನ್ನು 8 ನೇ ವರದಿಯಲ್ಲಿ ಸೇರಿಸಲಾಯಿತು.

9 ನೇ ವರದಿಯ ಮುಖ್ಯಾಂಶಗಳು: ಒಂಬತ್ತನೆಯ ವರದಿಯು ಹಿಂದಿನ ವರದಿಗಳಲ್ಲಿ ಸೇರದೆ ಇರುವ ವಿಷಯಗಳು ಹಾಗೂ ಹೊಸ ಸವಾಲುಗಳನ್ನು ಒಳಗೊಂಡಂತೆ 4 ಪ್ರಮುಖ ವಿಷಯಗಳಲ್ಲಿ 449 ಹೊಸ ಶಿಫಾರಸುಗಳನ್ನು ಪ್ರಸ್ತುತಪಡಿಸಿದೆ.

1) ಹಿಂದಿನ ಶಿಫಾರಸುಗಳ ಅನುಷ್ಠಾನದ ಪ್ರಗತಿ ತ್ವರಿತಗೊಳಿಸುವದು.
2) ಮಂಡಳಿಗಳು, ನಿಗಮಗಳು ಸರ್ಕಾರಿ ಸಂಘಗಳು ಮತ್ತು ಪ್ರಾಧಿಕಾರಗಳ ಪುನರ್ರಚನೆ.
3) ಭೂಸ್ವಾಧೀನ ಮತ್ತು ಸಂಬಂಧಿತ ಸುಧಾರಣೆಗಳು.
4) ಸಾಮಾನ್ಯ ಆಡಳಿತಾತ್ಮಕ, ಹಣಕಾಸು ಮತ್ತು ಇ ಆಡಳಿತ ಸುಧಾರಣೆಗಳು ಈ ವರದಿಯೊಂದಿಗೆ ಆಯೋಗ ಮ ಈಗ 42 ಇಲಾಖೆಗಳನ್ನು ಒಳಗೊಂಡ ಒಟ್ಟು 5677 ಶಿಫಾರಸುಗಳನ್ನು ಮಾಡಿದೆ.

8 ನೇ ವರದಿಯಲ್ಲಿ 5228 ಶಿಫಾರಸುಗಳನ್ನು ಮಾಡಲಾಗಿದ್ದು, ಅವುಗಳಲ್ಲಿ 1852 ಕಾರ್ಯಗತಗೊಂಡಿದೆ. 192 ಭಾಗಶಃ ಕಾರ್ಯಗತಗೊಳಿಸಲಾಯಿತು. 887 ಅನುಷ್ಠಾನ ಹಂತದಲ್ಲಿದೆ. 1745 ಮುಂದಿನ ಹಂತದ ಪರಿಶೀಲನೆಯಲ್ಲಿದೆ. 363 ಶಿಫಾರಸುಗಳನ್ನು ಒಪ್ಪಿರುವುದಿಲ್ಲ ಎಂದು ತಿಳಿಸಿದ್ದಾರೆ. ಆಯೋಗವು 82 ಮಂಡಳಿ ನಿಗಮವನ್ನು ಪರಿಶೀಲಿಸಿ,7 ಘಟಕಗಳನ್ನು ಮುಚ್ಚಲು ಮತ್ತು 9 ಘಟಕಗಳನ್ನು ವಿಲೀನಗೊಳಿಸಲು ಶಿಫಾರಸು ಮಾಡಿದೆ.

ಮುಚ್ಚಲು ಶಿಫಾರಸು: 1. ಕರ್ನಾಟಕ ರಾಜ್ಯ ಕಲ್ಯಾಣ ಮಂಡಳಿ.2. ಕರ್ನಾಟಕ ರಾಜ್ಯ ಸಂಯಮ ಮಂಡಳಿ. 3ಕರ್ನಾಟಕ ಸಹಕಾರಿ ಕೋಳಿ ಸಾಕಣಿಕೆ ಒಕ್ಕೂಟ. 4. ಕರ್ನಾಟಕ ಪಲ್ಪ್ ವುಡ್ ಲಿಮಿಟೆಡ್. 5. ಕರ್ನಾಟಕ ರಾಜ್ಯ ಅಗ್ರೋ ಕಾರ್ನ್ ಪ್ರಾಡಕ್ಟ ಲಿಮಿಟೆಡ್.6. ಮೈಸೂರ್ ಲ್ಯಾಂಪ್ ಲಿಮಿಟೆಡ್.7. ಕರ್ನಾಟಕ ಅಗ್ರೋ ಇಂಡಸ್ಟ್ರೀಸ್ ಕಾರ್ಪೊರೇಶನ್ ಲಿಮಿಟೆಡ್‌ಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ.

ನಿಗಮಗಳ ವಿಲೀನ: ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ ಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ, ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿಯೊಂದಿಗೆ, ಆಹಾರ ಕರ್ನಾಟಕ ನಿಗಮವನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಪ್ತು ನಿಗಮದೊಂದಿಗೆ, ಬೆಂಗಳೂರು ಸಬ್ ಅರ್ಬನ್ ರೇಲ್ವೆ ಕಂಪನಿ ಲಿಮಿಟೆಡನ್ನು ರೈಲು ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ ಲಿಮಿಟೆಡ್‌ನೊಂದಿಗೆ, ಕರ್ನಾಟ ಕ ಕೈಮಗ್ಗ ಅಭಿವೃದ್ದಿ ನಿಗಮವನ್ನು ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದೊಂದಿಗೆ, ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ ಲಿ.ನ್ನು ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿ. ನೊಂದಿಗೆ, ಕರ್ನಾಟಕ ಗೇರು ಅಭಿವೃದ್ದಿ ನಿಗಮವನ್ನು ಕರ್ನಾಟಕ ರಾಜ್ಯ ಅರಣ್ಯಕೈಗಾರಿಕೆ ನಿಗಮದೊಂದಿಗೆ, ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಕ್ರಷಿ ವಿಜ್ಞಾನ ವಿದ್ಯಾಲಯದೊಂದಿಗೆ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ಸಂಬಂಧಿಸಿದ ನೀರಾವರಿ ನಿಗಮದೊಂದಿಗೆ ವಿಲೀನಗೊಳಿಸಲು ಶಿಫಾರಸು ಮಾಡಲಾಗಿದೆ.

ಮುಚ್ಚಲು ಮತ್ತು ವಿಲೀನಗೊಳಿಸಲು ಶಿಫಾರಸು ಮಾಡಿದ ಸಂಸ್ಥೆಗಳು ಇನ್ನೂ ಸಹ ನಷ್ಟದಲ್ಲಿ ಸಕ್ರಿಯವಾಗಿ ಮುಂದುವರೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleವಿರಾಟ್ ಕೊಹ್ಲಿಯಿಂದ ಸಚಿನ್ ದಾಖಲೆ ಮುರಿಯಲು ಇನ್ನೊಂದು ಶತಕ ಬೇಕು!
Next articleಪರಮ್ ಫೌಂಡೇಶನ್‌ನಿಂದ ‘ಮಹಾಕ್ಷತ್ರಿಯ’ ನೃತ್ಯರೂಪಕ , ಸಂವಾದ ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ

LEAVE A REPLY

Please enter your comment!
Please enter your name here