ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ

0
1

ದಾಂಡೇಲಿ: ಸರಕಾರವು ಮನೆಯಲ್ಲಿ ಕುಳಿತು ಅತಿ ಸರಳವಾಗಿ ಇ-ಖಾತಾ ಸೇವೆಯನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಕಾಲಾವಧಿಯಲ್ಲಿ ಪಡೆಯಲು ತಂತ್ರಾಂಶ ರೂಪಿಸಿದ್ದು, ಅದರಂತೆ ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಈ ಮಾಹಿತಿಯನ್ನು ನೇರವಾಗಿ ವೀಕ್ಷಿಸಬಹುದಾಗಿದೆ ಎಂದು ದಾಂಡೇಲಿ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದ್ದಾರೆ.

ಸದರಿ ಮಾಹಿತಿಗಳ ಬಗ್ಗೆ ತಕರಾರು ಇದ್ದಲ್ಲಿ ಸಾರ್ವಜನಿಕರು ಇ-ಆಸ್ತಿ ತಂತ್ರಾಂಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದಾಗಿದೆ. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರ ಸಂಸ್ಥೆಗಳು ಪರಿಶೀಲಿಸಿ ಅನುಮೋದಿಸಲಾಗುವುದು. ಅಂತಿಮ ಇ-ಖಾತಾವನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕುಳಿತು ಪಡೆಯಬಹುದಾಗಿದೆ.

ಇ-ಖಾತಾ ಪಡೆಯಲು ಬೇಕಾದ ದಾಖಲೆಗಳು, ಮಾಲೀಕರ ಭಾವಚಿತ್ರ ಹಾಗೂ ಆಧಾರ್, ಆಸ್ತಿ ತೆರಿಗೆ ಚಲನ್, ಸ್ವತ್ತಿನ ದಾಖಲೆಗಳು, ಕ್ರಯ ಪತ್ರ, ವಿದ್ಯುತ್ ಆರ್.ಆರ್. ನಂಬರ್, ಸ್ವತ್ತಿನ ಛಾಯಾ ಚಿತ್ರ, ಋಣಭಾರ ನಮೂನೆ-15/16 (EC), ಸ್ವತ್ತಿಗೆ ಸಂಬಂಧಿಸಿದ ಇತರೇ ಪೂರಕ ಅಗತ್ಯ ದಾಖಲೆಗಳು ಬೇಕಿದೆ.

ಹೆಚ್ಚಿನ ಮಾಹಿತಿಗಾಗಿ 7259585959 ಅಥವಾ www.eaasthi.karnataka.gov.inಅಥವಾ ದಾಂಡೇಲಿ ನಗರಸಭೆಯ ಕಂದಾಯ ಶಾಖೆಯನ್ನು ಸಂಪರ್ಕಿಸಿ. ಕರ್ನಾಟಕ-1 ಕೆಂದ್ರಗಳಲ್ಲಿ ಸಹ ನಾಗರಿಕರು ತಂತ್ರಾಂಶವನ್ನು ಬಳಸಿ ಸೇವೆಯನ್ನು ಪಡೆಯಬಹುದೆಂದು ಪೌರಾಯುಕ್ತರು ತಿಳಿಸಿದ್ದಾರೆ.

Previous articleಅಪ್ಪು ಅಭಿಮಾನಿ, ವೃದ್ಧೆ ಗೌರಮ್ಮ ನಿಧನ