ಶಿರಸಿ: ಕಾಲೇಜು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್ ಉರುಳಿ 19 ವಿದ್ಯಾರ್ಥಿಗಳಿಗೆ ಗಾಯವಾದ ಘಟನೆ ಯಾಣದ ಸಮೀಪ ಹಸೆಮನೆ ತಿರುವಿನ ಬಳಿ ನಡೆದಿದೆ.
ದಾವಣಗೆರೆ ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪ್ರವಾಸಕ್ಕೆಂದು ದಾವಣಗೆರೆಯಿಂದ ಶಿರಸಿಗೆ ಶಿಕ್ಷಕರು ಸೇರಿ 52 ಜನ ಆಗಮಿಸಿದ್ದರು. ಶಿರಸಿ ಮಾರಿಕಾಂಬಾ ದೇವಾಲಯ ದರ್ಶನ ಪಡೆದು ಯಾಣದ ಸಮೀಪದ ವಿಭೂತಿ ಫಾಲ್ಸ್‌ಗೆ ಮಂಗಳವಾರ ಮಧ್ಯಾಹ್ನ ತೆರಳುತ್ತಿದ್ದಾಗ ಬಸ್ ಪಲ್ಟಿಯಾಗಿದೆ.
ಗಾಯಾಳುಗಳನ್ನು ಅಂಕೋಲ, ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






















