ಮೂರನೇ ಸಿಎಂ ಎನ್ನೋದು ಕಾಂಗ್ರೆಸ್ ಭ್ರಮೆ: ಹೆಬ್ಬಾರ

0
44
Shivaram hebbar

ಮುಂಡಗೋಡ: ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಎಂಬುವುದು ಕಾಂಗ್ರೆಸ್ ಭ್ರಮೆಯಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ಪಟ್ಟಣದ ಪಪಂ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅವರ ನಾಯಕತ್ವದಲ್ಲಿ ಪೂರ್ಣ ಅವಧಿಯನ್ನು ಮುಗಿಸಿ ಹಾಗೂ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದಾಗಿ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿರುವವರೆಲ್ಲ ನಿದ್ದೆಯ ಮಂಪರಿನಲ್ಲಿ ಮಾತನಾಡುತ್ತಿದ್ದಾರೆ. ಅದು ಕಾಂಗ್ರೆಸ್ ಪರಿಕಲ್ಪನೆಯಷ್ಟೆ. ಯಾವ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಬೊಮ್ಮಾಯಿಯವರ ಬದಲಾವಣೆ ಇಲ್ಲ. ಈಗಾಗಲೇ ರಾಷ್ಟ್ರೀಯ ನಾಯಕರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ನಾಯಕರು ಬಸವರಾಜ ಬೊಮ್ಮಾಯಿ ಅವರು ಮುಂದುವರೆಯುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

Shivaram hebbar
Previous articleಹರ್‌ಘರ್ ತಿರಂಗಾ ಬಾಗಲಕೋಟೆಯಲ್ಲಿ ಸಂಭ್ರಮ
Next articleಮುಟ್ಟಳ್ಳಿಯಲ್ಲಿ ಕೇಂದ್ರ ಭೂ ವಿಜ್ಞಾನಿಗಳಿಂದ ಅಧ್ಯಯನ