Home Advertisement
Home ನಮ್ಮ ಜಿಲ್ಲೆ ಉಡುಪಿ ಜಾಲತಾಣಗಳಲ್ಲಿ ದ್ವೇಷವನ್ನುಂಟುಮಾಡುವ ಪೋಸ್ಟ್‌‌: ಇಬ್ಬರು ಅರೆಸ್ಟ್

ಜಾಲತಾಣಗಳಲ್ಲಿ ದ್ವೇಷವನ್ನುಂಟುಮಾಡುವ ಪೋಸ್ಟ್‌‌: ಇಬ್ಬರು ಅರೆಸ್ಟ್

0
225

ಉಡುಪಿ: ಕಾರ್ಕಳದ ಹಿಂದೂ ವಿವಾಹಿತೆ ಮತ್ತು ಮುಸ್ಲಿಂ ಯುವಕನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯವಾಗಿ ಬರೆದು ಧರ್ಮ-ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ಪೋಸ್ಟ್‌ ಮಾಡಿರುವ ಆರೋಪದಲ್ಲಿ ಮಣಿಪಾಲ ಪೊಲೀಸರು ಈರ್ವರನ್ನು ಬಂಧಿಸಿದ್ದಾರೆ.

ಈ ಕುರಿತಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ 2025ರ ಮೇ 16ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ತನಿಖೆ‌ ನಡೆಸಿರುವ ಪೊಲೀಸರು, ಮೆಟಾ ಡಾಟಾ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಬಂಟ್ವಾಳದ ನಿತೇಶ್‌ ಕೆ. (20) ಎಂಬಾತನನ್ನು ಜ‌ನವರಿ 30ರಂದು ಪುತ್ತೂರಿನಲ್ಲಿ ಹಾಗೂ ಕಡಬ ಸಿರಿಬಾಗಿಲು ಹಿತೇಶ್‌ ಎ. (19) ಎಂಬಾತನನ್ನು ಫೆಬ್ರುವರಿ 1ರಂದು ಮಂಗಳೂರು ಲಾಲ್‌ಬಾಗ್‌ನಲ್ಲಿ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ಮೊಬೈಲ್‌ಗಳನ್ನು ಸ್ವಾಧೀನಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.