Home Advertisement
Home ನಮ್ಮ ಜಿಲ್ಲೆ ಉಡುಪಿ ಕಾರ್ಕಳದಿಂದ ಸ್ಪರ್ಧೆ ಮುತಾಲಿಕ್ ಅಧಿಕೃತ ಘೋಷಣೆ

ಕಾರ್ಕಳದಿಂದ ಸ್ಪರ್ಧೆ ಮುತಾಲಿಕ್ ಅಧಿಕೃತ ಘೋಷಣೆ

0
104
ಮುತಾಲಿಕ

ಕಾರ್ಕಳ: ’ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಪ್ರಮೋದ್ ಮುತಾಲಿಕ್ ಸ್ಪರ್ಧೆ ಘೋಷಣೆಯಿಂದ ಕಾರ್ಕಳ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರ ಕ್ಷೇತ್ರದಲ್ಲಿ ಇದೀಗ ತ್ರಿಕೋನ ಸ್ಪರ್ಧೆ ಉಂಟಾಗಿದೆ.
ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಯಾರು ಏನೇ ಒತ್ತಡ ಹಾಕಿದರೂ ನಾನು ಕಾರ್ಕಳ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದು ನಿಶ್ಚಿತ. ಸಾವಿರಾರು ಕಾರ್ಯಕರ್ತರ ನೋವಿನ ಧ್ವನಿಯಾಗಿ, ಅವರ ಒತ್ತಡದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.
ನಾನು ಬಿಜೆಪಿ ವಿರೋಧಿಯಲ್ಲ. ನಾನು ಮೋದಿ ಪರವಾಗಿ ಹಿಂದುತ್ವದ ಪರವಾಗಿದ್ದೇನೆ, ಗೆದ್ದ ನಂತರವೂ ನನ್ನ ಬೆಂಬಲ ಬಿಜೆಪಿಗೆ ಇರಲಿದೆ. ನನ್ನ ಸ್ಪರ್ಧೆ ಏನಿದ್ದರೂ ವ್ಯಕ್ತಿಗಳ ವಿರುದ್ಧ, ಭ್ರಷ್ಟರ ವಿರುದ್ಧ, ಹಿಂದು ವಿರೋಧಿಗಳ ವಿರುದ್ಧ ಎಂದರು.
ಮುತಾಲಿಕ್ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಆ ಪ್ರಶ್ನೆಯೇ ಇಲ್ಲ. ನಾನು ಎಂದಿಗೂ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದವ. ಇಲ್ಲಿ ನಾನು ಗೆಲ್ಲಬೇಕು, ಹಿಂದುತ್ವ ಗೆಲ್ಲಬೇಕು ಅಷ್ಟೇ ಎಂದರು.
ಉಡುಪಿ ಜಿಲ್ಲೆಯಲ್ಲಿ ಗೋ ಹತ್ಯೆಯಾಗುವ ನಂಬರ್ ಒಂದು ಜಾಗ ಇದ್ದರೆ ಅದು ಕಾರ್ಕಳ ಎನ್ನುತ್ತಿದ್ದಾರೆ. ಇವರಿಗೆ ಗೋ ಮಾತೆಯ ರಕ್ಷಣೆಗಾಗಿ ಅಧಿಕಾರ ಕೊಟ್ಟರೆ ಗೋಮಮಾತೆ ರಕ್ಷಣೆ ಆಗುತ್ತಿಲ್ಲ ಎಂದು ಸಚಿವ ಸುನೀಲ್ ಕುಮಾರ್ ವಿರುದ್ಧ ಟೀಕಿಸಿದರು.

Previous articleಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ಪಿಎಚ್‌ಡಿ: ಸಿಎಂ
Next articleಹರ್ಮಲ್ ಕಡಲತೀರದಲ್ಲಿ ಡಾಲ್ಫಿನ್ ಸಾವು