ಉಡುಪಿ: ಕೊಲ್ಲೂರು ಮೂಕಾಂಬಿಕೆಗೆ ವಜ್ರ ಕಿರೀಟ ಅರ್ಪಣೆ

0
30

ಉಡುಪಿ: ಬಹುಭಾಷಾ ಸಂಗೀತ ನಿರ್ದೇಶಕ ಇಳಯರಾಜ ಹರಕೆ ರೂಪದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಸುಮಾರು 4 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟವನ್ನು ಬುಧವಾರ ಸಮರ್ಪಿಸಿದರು.

ಜೊತೆಗೆ ಕ್ಷೇತ್ರದ ಶ್ರೀ ವೀರಭದ್ರ ಸ್ವಾಮಿಗೆ ರಜತ ಕಿರೀಟ ಸಹಿತ ಖಡ್ಗ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಹಾಜರಿದ್ದರು. ವಜ್ರ ಖಚಿತ ಕಿರೀಟವನ್ನು ಓಲಗ ಮಂಟಪದಿಂದ ಪುರ ಮೆರವಣಿಗೆಯಲ್ಲಿ ಶ್ರೀದೇವಿ ಸನ್ನಿಧಿಗೆ ಬರಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

Previous articleಬಾಗಲಕೋಟೆ: ವಿವಾದಕ್ಕೆ ಕಾರಣವಾದ ಕಟೌಟ್..!
Next articleಏಷ್ಯಾಕಪ್‌ ಕ್ರಿಕೆಟ್‌: ಭಾರತ ಭರ್ಜರಿ ಜಯದೊಂದಿಗೆ ಶುಭಾರಂಭ

LEAVE A REPLY

Please enter your comment!
Please enter your name here