ವ್ಯಾಪಕ ಸುಂಕ ಹೇರಿಕೆಗೆ ಟ್ರಂಪ್‌ಗಿಲ್ಲ ಅಧಿಕಾರ!

0
4

ವಾಷಿಂಗ್ಟನ್: ಜಗತ್ತಿನ ಬಹುತೇಕ ದೇಶಗಳ ಮೇಲೆ ವ್ಯಾಪಕ ಸುಂಕ ಹೇರಲು ಅಮೆರಿಕ ಅಧ್ಯಕ್ಷರು ಕಾನೂನುಬದ್ಧ ಅಧಿಕಾರ ಹೊಂದಿಲ್ಲ ಎಂದು ಫೆಡರಲ್ ಮೇಲ್ಮನವಿ ನ್ಯಾಯಾಲಯವು ಶುಕ್ರವಾರ 7-4 ಬಹುಮತದ ತೀರ್ಪು ನೀಡಿದೆ.

ಆದರೂ ಸದ್ಯಕ್ಕೆ ಸುಂಕ ಜಾರಿಯಲ್ಲಿರುವುದಕ್ಕೆ ಹಾಗೂ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಕ್ಕೆ ಸಮಯಾವಕಾಶ ನೀಡಿದೆ. ಈ ಕೋರ್ಟ್ ತೀರ್ಪು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರೀ ಮುಖಭಂಗವೆಂದೇ ಪರಿಗಣಿಸಲಾಗುತ್ತಿದೆ.

ಟ್ರಂಪ್ ಅವರು ತುರ್ತು ಅಧಿಕಾರ ಕಾನೂನನಡಿ ನೀಡಿರುವ ಅಧಿಕಾರ ಮೀರಿ ವರ್ತಿಸಿದ್ದಾರೆ ಎಂಬುದು ಅಮೆರಿಕದ ಫೆಡರಲ್ ಸರ್ಕ್ಯೂಟ್‌ಗಾಗಿ ಮೇಲನ್ಮವಿ ನ್ಯಾಯಾಲಯದ ದೂಷಣೆ. ಹಾಗೆಯೇ ಕಳೆದ ಮೇ ತಿಂಗಳಲ್ಲಿ ನ್ಯೂಯಾರ್ಕ್‌ನಲ್ಲಿರುವ ವ್ಯಾಪಾರಕ್ಕೆ ಸಂಬಂಧಿಸಿದ ಫೆಡರಲ್ ವಿಶೇಷ ನ್ಯಾಯಾಲಯದ ತೀರ್ಪಿನ ಬಹು ಅಂಶಗಳನ್ನೂ ಸಮರ್ಥಿಸಿದೆ.

ಆದರೆ 1977ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಮುಂದೇನಾಗಬಹುದು?: ಟ್ರಂಪ್ ಅವರ ಸುಂಕಗಳನ್ನು ಅಮೆರಿಕ ನ್ಯಾಯಾಲಯಗಳು ಭವಿಷ್ಯದಲ್ಲಿ ರದ್ದುಪಡಿಸಿದ್ದಲ್ಲಿ ಈಗಾಗಲೇ ಸಂಗ್ರಹಿಸಿದ ಆಮದು ಸುಂಕಗಳನ್ನು ಮರುಪಾವತಿ ಮಾಡಬೇಕಾಗಬಹುದು. ಇದರಿಂದ ಅಮೆರಿಕದ ಖಜಾನೆಗೆ ಭಾರೀ ದೊಡ್ಡ ಹೊಡೆತ ಬೀಳಬಹುದು. ಜುಲೈ ತಿಂಗಳಲ್ಲಿ 159 ಶತಕೋಟಿ ಡಾಲರ್ ಸುಂಕ ಆದಾಯ ಸಂಗ್ರಹಿಸಲಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹಿಸಲಾಗಿರುವುದರ ಎರಡು ಪಟ್ಟುಗಳಷ್ಟಾಗಿವೆ.

Previous articleನಿರೀಕ್ಷೆಗೂ ಮೀರಿ ಭಾರತದ ಆರ್ಥಿಕ ಬೆಳವಣಿಗೆ
Next articleಅಂಕಣ ಬರಹ: ಅಮೆರಿಕಾದ ವಿದ್ರೋಹ – ಚೀನಾದತ್ತ ಭಾರತ

LEAVE A REPLY

Please enter your comment!
Please enter your name here