ಏಕತಾ ಪ್ರತಿಮೆ ಮತ್ತು ಕೆಂಪೇಗೌಡರ ಬೃಹತ್ ಪ್ರತಿಮೆಯ ಶಿಲ್ಪಿ ರಾಮ್ ಸುತಾರ್ ನಿಧನ!

0
5

ಮಹಾರಾಷ್ಟ್ರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಹಾಗೂ ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ವಿನ್ಯಾಸಗೊಳಿಸಿದ ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಶಿಲ್ಪಿ ರಾಮ್ ಸುತಾರ್ ಅವರು ಗುರುವಾರ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಮೂಲಗಳ ಪ್ರಕಾರ, ವಯೋಸಹಜ ಕಾಯಿಲೆಯಿಂದಾಗಿ ಡಿಸೆಂಬರ್ 18ರಂದು ಬೆಳಗ್ಗೆ ನೊಯ್ಡಾ ನಿವಾಸದಲ್ಲಿ ರಾಮ್ ಸುತಾರ್ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಭಾರತೀಯ ಶಿಲ್ಪಕಲಾ ಲೋಕಕ್ಕೆ ಅಪಾರ ನಷ್ಟ ಸಂಭವಿಸಿದೆ.

ಇದನ್ನೂ ಓದಿ: ವಲಸೆ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ‍್ಯಾಕರ್

ಫ್ರೆಂಚ್ ಹಾಗೂ ಇಟಾಲಿಯನ್ ಶಿಲ್ಪ ದಿಗ್ಗಜರ ಮಟ್ಟಿಗೆ ಹೋಲಿಕೆ: ರಾಮ್ ಸುತಾರ್ ಅವರ ಶಿಲ್ಪಶೈಲಿಯನ್ನು ಜಗತ್ಪ್ರಸಿದ್ಧ ಫ್ರೆಂಚ್ ಶಿಲ್ಪಿ ಆಗಸ್ಟೆ ರೋಡಿನ್ ಹಾಗೂ ಇಟಾಲಿಯನ್ ಶಿಲ್ಪ ದಿಗ್ಗಜ ಮೈಕೆಲ್ಯಾಂಜೆಲೊ ಡಿ ಲೊಡೊವಿಕೊ ಬುವೊನಾರೊಟಿ ಸಿಮೋನಿ ಅವರ ಶೈಲಿಗೆ ಹೋಲಿಸಲಾಗುತ್ತಿತ್ತು. ಅವರ ಶಿಲ್ಪಗಳಲ್ಲಿ ಜೀವಂತತೆ, ಭಾವನಾತ್ಮಕ ಅಭಿವ್ಯಕ್ತಿ ಹಾಗೂ ನೈಜತೆಯ ಸ್ಪರ್ಶ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿತ್ತು.

ಬಾಲ್ಯ, ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನ: 1925ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡುರ್ ಗ್ರಾಮದಲ್ಲಿ ಜನಿಸಿದ ರಾಮ್ ಸುತಾರ್, ತಮ್ಮ ಜೀವನವನ್ನು ಶಿಲ್ಪಕಲೆಗೆ ಅರ್ಪಿಸಿದ್ದರು. ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಭಾರತದ 150ಕ್ಕೂ ಹೆಚ್ಚು ನಗರಗಳಲ್ಲಿ 350ಕ್ಕೂ ಹೆಚ್ಚು ಶಿಲ್ಪಗಳನ್ನು ವಿನ್ಯಾಸಗೊಳಿಸಿ ನಿರ್ಮಿಸಿದ್ದಾರೆ.

ಗೌರವಗಳು ಮತ್ತು ಪ್ರಶಸ್ತಿಗಳು: ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ರಾಮ್ ಸುತಾರ್ ಅವರಿಗೆ ಕಳೆದ ತಿಂಗಳಷ್ಟೇ ಮಹಾರಾಷ್ಟ್ರ ಸರ್ಕಾರದ ಅತ್ಯುನ್ನತ ನಾಗರಿಕ ಗೌರವವಾದ ‘ಮಹಾರಾಷ್ಟ್ರ ಭೂಷಣ್’ ಪ್ರಶಸ್ತಿಯನ್ನು ನೋಯ್ತಾದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಪ್ರದಾನ ಮಾಡಿದ್ದರು.

ಪ್ರಸಿದ್ಧ ಶಿಲ್ಪಿ ಯೋಗಿ ಅರುಣ್ ಯೋಗಿರಾಜ್ ಅವರು ಸಾಮಾಜಿಕ ಜಾಲತಾಣ ಸಂತಾಪ ಸೂಚಿಸಿದ್ದಾರೆ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀರಾಮ್ ವಿ. ಸುತಾರ್ ಅವರು ನಮ್ಮ ದೇಶದ ದಂತಕಥೆ ಶಿಲ್ಪಿಯಾಗಿದ್ದಾರೆ. ಅವರ ನಿಧನದಿಂದ ಅಪಾರ ದುಃಖವಾಗಿದೆ. ಅವರ ಅದ್ಭುತ ಶಿಲ್ಪಗಳು ಮುಂದಿನ ತಲೆಮಾರಿಗೆ ಸದಾ ಸ್ಫೂರ್ತಿಯಾಗಿರುತ್ತವೆ ಎಂದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಪ್ರಶಸ್ತಿ ಪ್ರದಾನ

ರಾಮ್ ಸುತಾರ್ ಅವರ ಶಿಲ್ಪಕಲಾ ಪರಂಪರೆ ಶಾಶ್ವತವಾಗಿ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಅಜರಾಮರವಾಗಲಿದೆ.

Previous articleಅಭಿಮಾನಿಗಳಿಗೆ ಗುಡ್ ನ್ಯೂಸ್: ನಿಮಗಾಗಿ ಕಾದಿವೆ ’45’ ಸೀಟುಗಳು..!