ಏಳು ದಿನಗಳ ನಿರಂತರ ಭರತನಾಟ್ಯ ಪ್ರದರ್ಶನ: ರೆಮೋನಾ ಪಿರೇರಾ ವಿಶ್ವ ದಾಖಲೆ

0
75

ಮಂಗಳೂರು: ಏಳು ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ದಾಖಲೆ ಮಾಡುವ ಮೂಲಕ ಮಂಗಳೂರಿನ ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಸಂತ ಅಲೋಶಿಯಸ್ ವಿ.ವಿ.ಯಲ್ಲಿ ಜು.28 ರಂದು ನಡೆದ ಕಾರ್ಯಕ್ರಮದಲ್ಲಿ ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡದಿಂದ ಅಧಿಕೃತವಾಗಿ ಘೋಷಣೆ ಪಡೆದುಕೊಂಡು, ಪ್ರಶಸ್ತಿ ಸ್ವೀಕರಿಸಿದರು.

ಮಂಗಳೂರಿನ ಸಂತ ಅಲೋಶಿಯಸ್ ವಿ.ವಿ.ಯ ವಿದ್ಯಾರ್ಥಿನಿ ರೆಮೋನಾ ಅವರು ಇದೇ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಜು. 21ರಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರೆಮೋನಾ ಭರತನಾಟ್ಯ ಪ್ರದರ್ಶಿಸಿದ್ದಾರೆ. ಬೆಳಗ್ಗೆಯಿಂದ ಆರಂಭಿಸಿದ ಭರತನಾಟ್ಯ ಪ್ರದರ್ಶನ ಹಗಲು-ರಾತ್ರಿ ನಿರಂತರವಾಗಿ ಜು.28 ರ ಮಧ್ಯಾಹ್ನವರೆಗೆ ನಡೆದಿತ್ತು.

ಏಳು ದಿನಗಳ‌ ಪ್ರದರ್ಶನ ಕ್ಯಾಮರಾದ ಮೂಲಕ ರೆಕಾರ್ಡ್ ಮಾಡುವ ಮೂಲಕ ಅಧಿಕಾರಿಗಳು ರೆಮೋನಾ ಸಾಧನೆಯನ್ನು ಸಂಪೂರ್ಣವಾಗಿ ದಾಖಲೀಕರಣ ಮಾಡಿಕೊಂಡಿದ್ದಾರೆ. ಮೂಲಕ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೆಮೋನಾ ಪಿರೇರಾ ನಿರಂತರ ಭರತನಾಟ್ಯ ಮಾಡುತ್ತಿದ್ದಾಗ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್​ ಒಳಗೊಂಡ ತಂಡವೂ ಸ್ಥಳದಲ್ಲಿ ಹಾಜರಿತ್ತು. ಪ್ರತಿ ಬಾರಿ 3 ಗಂಟೆಗೊಮ್ಮೆ ವಿಶ್ರಾಂತಿ ಪಡೆಯುತ್ತಿದ್ದಾಗ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಿದ್ದರು.

ಲಾತೂರ್‌ನ 16 ವರ್ಷದ ಸುಧೀರ್ ಜಗಪತ್ ಅವರು 2023ರಲ್ಲಿ 127 ಗಂಟೆಗಳ ಕಾಲ ನಿರಂತರ ನೃತ್ಯ ಪ್ರದರ್ಶನ ನೀಡಿರುವುದು ಈವರೆಗಿನ ದಾಖಲೆಯಾಗಿತ್ತು, ರೆಮೋನಾ ಪಿರೇರಾ ಅವರು ಈ ದಾಖಲೆಯನ್ನು ಜು.26 ರ ಸಂಜೆಯೇ ಮುರಿದಿದ್ದು ಸೋಮವಾರ ಮಧ್ಯಾಹ್ನದವರೆಗೆ ಭರತನಾಟ್ಯ ಪ್ರದರ್ಶನವನ್ನು ಮುಂದುವರೆಸಿದ್ದರು. ಪ್ರತೀ 3 ಗಂಟೆಗೆ 15 ನಿಮಿಷ ಮಾತ್ರ ಬಿಡುವು ಇರುತ್ತಿತ್ತು. ಒಟ್ಟು ಏಳು ದಿನಗಳ ಅವಧಿಯಲ್ಲಿ ರೆಮೋನಾ ಪಿರೇರಾ ಭರತನಾಟ್ಯದ ವಿವಿಧ ಪ್ರಕಾರಗಳ ಪ್ರದರ್ಶನ ಮಾಡಿ ತೋರಿಸಿದ್ದಾರೆ. ಅದಕ್ಕೆ ತಕ್ಕಂತೆ ರೆಕಾರ್ಡೆಡ್ ಹಾಡುಗಳನ್ನು ಬಳಕೆ ಮಾಡಲಾಗಿತ್ತು.

ಕಳೆದ 13 ವರ್ಷಗಳಿಂದ ರೆಮೋನಾ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಭರತನಾಟ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ವಿಶ್ವದಾಖಲೆಗಾಗಿ ಹಲವು ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿದ್ದ ರೆಮೋನಾ ಪಿರೇರಾ. ಪ್ರತಿದಿನ 5 ರಿಂದ 6ಗಂಟೆ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.

Previous articleಧರ್ಮಸ್ಥಳ ಪ್ರಕರಣ: ಅನಾಮಿಕ ವ್ಯಕ್ತಿ ಜತೆ ಎಸ್‌ಐಟಿ ಸ್ಥಳ ಮಹಜರು
Next articleನೇಹಾ ಕೊಲೆ: ಆರೋಪಿ ಜಾಮೀನು ಭವಿಷ್ಯ ಆ. 4ಕ್ಕೆ ನಿರ್ಧಾರ

LEAVE A REPLY

Please enter your comment!
Please enter your name here