ರಾಯಚೂರು: ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆಯಾಗಿಲ್ಲ, ಇವೆಲ್ಲ ಊಹಾಪೋಹಗಳು ಎಂದು ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ ಹುದ್ದೆಗೆ ನಮ್ಮ ಪಕ್ಷದಲ್ಲಿ ಅನೇಕರು ಇದ್ದಾರೆ. ಆದರೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಬದಲಾವಣೆಯ ಬಗ್ಗೆ ಊಹಾಪೋಹಗಳು ನಡೆತಿದೆ ಇದು ಸತ್ಯವಲ್ಲ.
ಬೀದರ್, ಯಾದಗಿರಿ, ಕೊಪ್ಪಳ ಸೇರಿ 4 ಜಿಲ್ಲೆಗಳ ಕುರುಬ ಸಮಾಜದವರಿಗೆ ಎಸ್ ಟಿ ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಏನಾಗಲಿದೆ ಕಾದು ನೋಡಬೇಕು ಎಂದು ತಿಳಿಸಿದರುರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಏನಾಗಲಿದೆ ಕಾದು ನೋಡಬೇಕು ಎಂದು ತಿಳಿಸಿದರು.
ಸಚಿವ ಸಂಪುಟ ಸರ್ಜರಿ ಆಗುತ್ತೆ ಅಂತ ಮುಖ್ಯಮಂತ್ರಿ ಹಾಗೂ ಕೆಲವರು ಸೂಚ್ಯವಾಗಿ ಹೇಳಿದ್ದಾರೆ ಡಿಸೆಂಬರ್ ನಲ್ಲಿ ಆಗಬಹುದು, ಸಿದ್ದರಾಮಯ್ಯ ಮುಖ್ಯಮಂತ್ರಿ ಇರುವವರೆಗೆ ಅವರು ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗುವುದಿಲ್ಲ, ಇದರ ಬಗ್ಗೆ ಸಿದ್ದರಾಮಯ್ಯ ಅವರೂ
ಹೇಳಿದ್ದಾರೆ ಎಂದರು
ಪ್ರತಾಪ್ ಸಿಂಹ ಯಾರು. ಅವರಿಗೆ ತಮ್ಮ ಪಕ್ಷದಲ್ಲಿಯೇ ಗೌರವವಿಲ್ಲ. ಇನ್ನು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆಯೇ ಎಂದು ಟೀಕಿಸಿದರು.
