ರಾಯಚೂರು: 1800 ಜನ ಕರಸೇವಕರಿಂದ ಸ್ವಚ್ಛ ಮಂತ್ರಾಲಯ ಅಭಿಯಾನ

0
45

ರಾಯಚೂರು: ಮೂರು ದಿನಗಳ ಕಾಲ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಹದಿನೆಂಟು ನೂರು ಕರಸೇವಕರಿಂದ ಹಮ್ಮಿಕೊಂಡಿರುವ ಸ್ವಚ್ಛ ಮಂತ್ರಾಲಯ ಅಭಿಯಾನಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮಂಗಳವಾರ ಚಾಲನೆ ನೀಡಿದರು.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಳಗೊಂಡ ಕರಸೇವಕರ ತಂಡ ಮಠದ ವಿವಿಧ ಸ್ಥಳಗಳಾದ ಸೂಚಿಸಿರುವ ಮೂವತ್ತೆಂಟು ಸ್ಥಳಗಳಲ್ಲಿ ಸ್ವಚ್ಛಗೊಳಿಸುವ ಕಾರ್ಯ ನಡೆಸಿದರು. ಶ್ರೀ ಸುಬುಧೇಂದ್ರ ಸ್ವಾಮಿಗಳು ಕರಸೇವಕರಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮಹಾತ್ಮ ಗಾಂಧಿಯವರ ಕನಸಿನ ಭಾರತವನ್ನು ಸುಂದರವಾಗಿಸುವ ದೃಷ್ಟಿಯಿಂದ ಸ್ವಚ್ಛ ಭಾರತದ ಕನಸು ಕಂಡಿದ್ದರು. ಇದೇ ಹಾದಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನವನ್ನು ಮುನ್ನೆಡೆಸುವ ನಿಟ್ಟಿನಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವ ತಂಡ ಸ್ವಚ್ಛ ಮಂತ್ರಾಲಯ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

Previous articleಧರ್ಮಸ್ಥಳ: ಬುರುಡೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಲಿ – ಈಶ್ವರಪ್ಪ
Next articleಐಬಿಪಿಎಸ್‌ನಿಂದ 13,217 ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವರಗಳು

LEAVE A REPLY

Please enter your comment!
Please enter your name here