ಮುದಗಲ್: ಬೈಕ್‌ಸವಾರನ್ನು ತಡೆದು ನಾಲ್ಕು ಲಕ್ಷ ರೂಗಳ ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ಇಲ್ಲಿಗೆ ಸಮೀಪದ ಮಟ್ಟೂರು ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಹಣ ಕಳೆದುಕೊಂಡವರು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಮುದಗಲ್ ಪಟ್ಟಣದ ಕೆನರಾ ಬ್ಯಾಂಕ್‌ನಿಂದ ಸಂಜೆ ನಾಲ್ಕು ಲಕ್ಷ ಹಣವನ್ನು ಡ್ರಾ(ಪಡೆದು)ಕೊಂಡು ಬೈಕ್ ಮೇಲೆ ಮುದಗಲ್‌ನಿಂದ ಮಟ್ಟೂರಿಗೆ ಮಲ್ಲಿಕಾರ್ಜುನ ಹಾಗೂ ಪಂಪಣ್ಣ ಎಂಬುವವರು ತೆರಳುತ್ತಿದ್ದರು.
ಮಟ್ಟೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್ ತಡೆದ ದುಷ್ಕರ್ಮಿಗಳು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮುದಗಲ್ ಠಾಣೆಯ ಸಿಪಿಐ ಹಾಗೂ ಪಿಎಸ್‌ಐ ವೆಂಕಟೇಶ ಮಾಡಗಿರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
























Thanks for sharing. I read many of your blog posts, cool, your blog is very good. https://www.binance.info/fr-AF/register?ref=JHQQKNKN