Home Advertisement
Home ನಮ್ಮ ಜಿಲ್ಲೆ ರಾಯಚೂರು ಮಂತ್ರಾಲಯ ರಸ್ತೆಯಲ್ಲಿನ ಅನಧಿಕೃತ ಅಂಗಡಿಗಳ ತೆರವು

ಮಂತ್ರಾಲಯ ರಸ್ತೆಯಲ್ಲಿನ ಅನಧಿಕೃತ ಅಂಗಡಿಗಳ ತೆರವು

0
19

ರಾಯಚೂರು: ನಗರದ ಮಂತ್ರಾಲಯ ರಸ್ತೆಯಲ್ಲಿರುವ ನವೋದಯ ಕಾಲೇಜು ಸಮೀಪದಲ್ಲಿ ಹಾಕಲಾಗಿದ್ದ ಸುಮಾರು 35ಕ್ಕೂ ಅಧಿಕ ಅಕ್ರಮ ಹೋಟೆಲ್ ಹಾಗೂ ಅಂಗಡಿ ಮುಂಗ್ಗಟ್ಟುಗಳ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಮಂಗಳವಾರ ನಡೆಸಿತು.

ಸೋಮವಾರ ರಾತ್ರಿಯೇ ತೆರವು ಕಾರ್ಯಾಚರಣೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಂಗಡಿ ಮುಂಗ್ಗಟ್ಟುಗಳ ಮಾಲೀಕರು ಸಾಮಾನುಗಳನ್ನು ತೆಗೆದುಕೊಂಡು
ಹೋಗುತ್ತಿರುವುದು ಕಂಡುಬಂದಿತು.

ಪಶ್ಚಿಮ ಠಾಣೆಯ ಸಿಪಿಐ ನಾಗರಾಜ ಮೇಕಾ ನೇತೃತ್ವದಲ್ಲಿ ನೇತಾಜಿನಗರ ಪಿಎಸ್‌ಐ ಬಸವರಾಜ ನಾಯಕ ಅವರು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ರನ್ನು ನಿಯೋಜಿಸಿ ತೆರವು ಕಾರ್ಯಾಚರಣೆ ನಡೆಸಲಾಯಿತು.