Home ನಮ್ಮ ಜಿಲ್ಲೆ ರಾಯಚೂರು ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ

ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ

0
13

ಸಿಂಧನೂರು: ಹತ್ತು ತೊಲೆ ಚಿನ್ನಾಭರಣ ಬಸ್‌ನಲ್ಲಿ ಬಿಟ್ಟು ಹೋಗಿದ್ದ ಮಹಿಳೆಗೆ ತಲುಪಿಸುವ ಮೂಲಕ ಬಸ್‌ ಚಾಲಕ ಕಮ್ ನಿರ್ವಾಹಕ ಚಂದ್ರಶೇಖರ ಪ್ರಾಮಾಣಿಕತೆ ಮೆರೆದಿದ್ದಾರೆ.

ಸಿಂಧನೂರಿನಿಂದ ರಾಯಚೂರಿಗೆ ಸಂಚರಿಸುವ ತಡೆರಹಿತ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪಾರ್ವತಿ ಎಂಬ ಮಹಿಳೆ ಸುಮಾರು 10 ತೊಲೆ ಚಿನ್ನಾಭರಣ ಬಸ್‌ನಲ್ಲಿಯೇ ಬಿಟ್ಟು ಮಾನ್ವಿ ಬಸ್ ನಿಲ್ದಾಣದಲ್ಲಿ ಇಳಿದು ಹೋಗಿದ್ದರು.

ಮಾನ್ವಿ ಪೊಲೀಸ್ ಅಧಿಕಾರಿಗಳು ಸಿಂಧನೂರು ಘಟಕ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಸಂಜೆ ಬಸ್ ಘಟಕಕ್ಕೆ ಬರುತ್ತಿದ್ದಂತೆ ಚಾಲಕ ಕಮ್ ನಿರ್ವಾಹಕ ಚಂದ್ರಶೇಖರ ಪ್ರಮಾಣಿಕವಾಗಿ ಬಸ್‌ನಲ್ಲಿ ಚಿನ್ನಾಭರಣ ಇದ್ದ ಬ್ಯಾಗ್‌ನ್ನು ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಚಾಲಕ ಕಮ್ ನಿರ್ವಾಹಕ ಚಂದ್ರಶೇಖರ್ ಪ್ರಮಾಣಿಕತೆಗೆ ಘಟಕ ವ್ಯವಸ್ಥಾಪಕ ಹೊನ್ನಪ್ಪ ಸೇರಿದಂತೆ ಘಟಕದ ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.