ಮಂತ್ರಾಲಯ ಶ್ರೀರಾಯರ ಹುಂಡಿಯಲ್ಲಿ 5.41 ಕೋಟಿ ಕಾಣಿಕೆ ಸಂಗ್ರಹ

0
7

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಕಳೆದ 34 ದಿನಗಳಿಂದ ಶ್ರೀರಾಯರ ಹುಂಡಿಯಲ್ಲಿ ಭಕ್ತರು ಹಾಕಿರುವ ಕಾಣಿಕೆಯ ಹಣ ಎಣಿಕೆ ಕಾರ್ಯವನ್ನು ಶ್ರೀಮಠದ ಭಕ್ತರು, ಸೇವಾಕರ್ತರು ನಡೆಸಿದರು. ಒಟ್ಟು 5.41 ಕೋಟಿ ಹಣ ಸಂಗ್ರಹಣೆಯಾಗಿದೆ.

5,26,89,128 ರೂ. ಗಳ ಮೌಲ್ಯದ ನೋಟುಗಳು, 14,58,100 ರೂ.ಗಳ ನಾಣ್ಯಗಳು ಸೇರಿದಂತೆ ಒಟ್ಟು 5,41,47,228 ನಗದು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಅಲ್ಲದೇ 80 ಗ್ರಾಂ ಗಳಷ್ಟು ಚಿನ್ನ, 1,610 ಗ್ರಾಂ ಗಳಷ್ಟು ಬೆಳ್ಳಿ(ರಜತ) ಸಂಗ್ರಹವಾಗಿದೆ ಎಂದು ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್ ತಿಳಿಸಿದ್ದಾರೆ.

Previous articleಶೀತಗಾಳಿ ತಪ್ಪಿಸಲು ಬೆಂಕಿ: ಹೊಗೆಯಿಂದ ಉಸಿರುಗಟ್ಟಿ ಮೂವರ ಸಾವು
Next articleಅಧಿವೇಶನದ ಮೊದಲ ಅವಧಿಯಲ್ಲೇ ಉ.ಕ. ಚರ್ಚೆಗೆ ಸಮಯ ಕಲ್ಪಿಸಿ

LEAVE A REPLY

Please enter your comment!
Please enter your name here