ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಸೋಮವಾರ ಕಳೆದ 20 ದಿನಗಳಿಂದ ಶ್ರೀಗುರುರಾಯರ ಹುಂಡಿಯಲ್ಲಿ ಭಕ್ತರ ಹಾಕಿರುವ ಕಾಣಿಕೆಯ ಹಣ ಎಣಿಕೆ ಕಾರ್ಯವನ್ನು ನಡೆಸಲಾಗಿದ್ದು, ಒಟ್ಟು 3.73 ಕೋಟಿ ಹಣ ಸಂಗ್ರಹಣೆಯಾಗಿದೆ.
3,62,69,247 ರೂ.ಗಳ ಮೌಲ್ಯದ ನೋಟುಗಳು, 10,97,340 ಮೊತ್ತದ ನಾಣ್ಯಗಳು ಸೇರಿದಂತೆ ಒಟ್ಟು 3,73,66,587 ನಗದು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಅಲ್ಲದೇ 87 ಗ್ರಾಂಗಳಷ್ಟು ಚಿನ್ನ, 910 ಗ್ರಾಂಗಳಷ್ಟು ಬೆಳ್ಳಿ(ರಜತ) ಸಂಗ್ರಹವಾಗಿದೆ ಎಂದು ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















