ಮೈಸೂರು: ಬೆಳಗಾವಿಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೆನೆ. ಮತ್ತೆ ಅದನ್ನೇ ಹೇಳುವುದಿಲ್ಲ. ನೋಟಿಸ್ ನೀಡಿದಾಗ ಅದಕ್ಕೆ ಉತ್ತರಿಸುತ್ತೆನೆ. ಸದ್ಯದ ಪರಿಸ್ಥಿಯಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪುನರುಚ್ಛಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಏನೂ ಹೇಳಬೇಕೋ ಹೇಳಿದ್ದಾಗಿದೆ. ಅನಗತ್ಯವಾಗಿ ಮತ್ತೆ ಅದನ್ನು ಮಾತಾಡಿ ವಿವಾದ ಸೃಷ್ಟಿ ಮಾಡಲ್ಲ. ನಾನು ನೀಡಿದ ಹೇಳಿಕೆ ವಿವಾದ ಪಡೆದ ಕ್ಷಣವೇ ಅದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದೇನೆ ಎಂದರು.
ಮಾಧ್ಯಮದ ಮುಂದೆ ಮತ್ತೆ ಏನೂ ಮಾತಾಡಲ್ಲ. ಈ ವಿಚಾರದ ಬಗ್ಗೆ ಎಲ್ಲಿ ಮಾತಾಡಬೇಕೋ ಅಲ್ಲಿ ಮಾತನಾಡುತ್ತೆನೆ. ಪಕ್ಷದ ಆತಂರಿಕ ವಿಚಾರ ಪಕ್ಷದ ಒಳಗೆ ಮಾತಾಡುತ್ತೇನೆ. ಪಕ್ಷದಿಂದ ನೋಟೀಸ್ ಬಂದಾಗ ಅದಕ್ಕೆ ಉತ್ತರಿಸುತ್ತೆನೆ ಎಂದರು.
ಬೆಳಗಾವಿಯಲ್ಲಿ ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ನವೆಂಬರ್ ಕ್ರಾಂತಿ ಉಹೋಪೋಹಾ ಅಷ್ಟೆ. ಇಂದಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ಪೊರೈಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
























