Home Advertisement
Home ನಮ್ಮ ಜಿಲ್ಲೆ ಮೈಸೂರು ‘ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದಾಗ ಕೋಪ ಬರುವುದಿಲ್ಲವೇ?’

‘ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದಾಗ ಕೋಪ ಬರುವುದಿಲ್ಲವೇ?’

0
124
ಯತೀಂದ್ರ ಸಿದ್ದರಾಮಯ್ಯ

ಸಾವರ್ಕರ್ ಅನ್ಯಮತ ದ್ವೇಷಿ, ಹಾಗಾಗಿ ಸಹಜವಾಗಿ ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾಗಳಲ್ಲಿ ಇದ್ದಾಗ ಕೋಪ ಬರುತ್ತೆ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನ ಅವರ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದಾಗ ಕೋಪ ಬರುವುದಿಲ್ಲವೇ? ಹೀಗೆ ಮುಸ್ಲಿಂ ಏರಿಯಾಗಳಲ್ಲಿ ಸಾವರ್ಕರ್ ಫೋಟೋ ಹಾಕಿದಾಗ ಪ್ರಚೋದನಕಾರಿಯಾಗುತ್ತದೆ. ಇಂತಹ ಘಟನೆಗಳನ್ನ ತಡೆಗಟ್ಟುವುದನ್ನು ಬಿಟ್ಟು, ಬಿಜೆಪಿಯವರು ಅನಗತ್ಯ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಹರಿಹಾಯ್ದರು.

Previous article‘ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ?’
Next articleಸಂಪ್ರದಾಯದಂತೆ ಶಾಲೆಯಲ್ಲಿ ಗಣೇಶೋತ್ಸವ