ಮೈಸೂರು: ಬದುಕಿನ ಯಾನ ಮುಗಿಸಿದ ಭೈರಪ್ಪಗೆ ಕಣ್ಣೀರಿನ ವಿದಾಯ – ಅಂತಿಮ ದರ್ಶನ ಪಡೆದ ಅಭಿಮಾನಿಗಳು

0
91

ಮೈಸೂರು: ಬೆಂಗಳೂರಿನಲ್ಲಿ ನಿಧನರಾದ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಪಾರ್ಥಿವ ಶರೀರವನ್ನು ಗುರುವಾರ ಮೈಸೂರಿಗೆ ತರಲಾಯಿತು. ನಗರದ ಕಲಾಮಂದಿರದ ಆವರಣದಲ್ಲಿ ಇಂದು ಮಧ್ಯಾಹ್ನ ೩.೩೦ಕ್ಕೆ ಪಾರ್ಥಿವ ಶರೀರವನ್ನು ತಂದು ಅಂತಿಮ ದರ್ಶನಕ್ಕೆ ಇಡಲಾಯಿತು.

ಸಾವಿರಾರು ಅಭಿಮಾನಿಗಳು, ಸಾಹಿತಿಗಳು, ರಾಜಕೀಯ ನೇತರಾರರು, ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರುಗಳು, ಸಂಸದರು, ಮಾಜಿ ಸಂಸದರು, ವಿದ್ಯಾರ್ಥಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು. ಅನೇಕರು ಕಣ್ಣೀರಿನ ಮೂಲಕ ವಿದಾಯ ಹೇಳಿದರು. ಇನ್ನೂ ಕೆಲವರು ಅವರೊಂದಿಗಿನ ಒಡನಾಡ, ಆತ್ಮೀಯತೆ ನೆನಪಿಸಿಕೊಂಡು ದುಖಿಸುತ್ತಿದ್ದು ಕಂಡುಬಂದಿತು.

ಕಲಾಮಂದಿರದ ಆವರಣದಲ್ಲಿ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿತ್ತು. ಸಾಲಾಗಿ ಬಂದ ಸಾರ್ವಜನಿಕರು ಭೈರಪ್ಪ ಅವರ ಅಂತಿಮ ದರ್ಶನ ಪಡೆದು ನಿರ್ಗಮಿಸಿದರು. ಈ ವೇಳೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಜಿಲ್ಲಾಮಂತ್ರಿ ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಹಿರಿಯ ಪತ್ರಕರ್ತ ವಿಶ್ವೇಶರಭಟ್, ಮಾಜಿ ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಶ್ರೀವತ್ಸ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಸ್ವಾಮೀಜಿಗಳು, ರಾಜಕೀಯ ಮುಖಂಡರು ಹಾಗೂ ಇತರರು ಅಂತಿಮ ದರ್ಶನ ಪಡೆದರು.

ಚಾಮುಂಡಿ ತಪ್ಪಲಿನಲ್ಲಿ ಅಂತ್ಯಕ್ರಿಯೆ: ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರ ಗೌರವಗಳೊಂದಿಗೆ ಶುಕ್ರವಾರ ಬೆಳಿಗ್ಗೆ 11:30ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ರವಿಶಂಕರ್ ಹಾಗೂ ಉದಯಶಂಕರ್ ಮಕ್ಕಳಿದ್ದಾರೆ. ರವಿಶಂಕರ್ ವಿದೇಶದಲ್ಲಿದ್ದರೆ, ಉದಯಶಂಕರ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Previous articleSLLC: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ ಸರ್ಕಾರ
Next articleದಸರಾ2025: ಬೆಂಗಳೂರು ಮಂಗಳೂರು ವಿಶೇಷ ರೈಲು ವೇಳಾಪಟ್ಟಿ  

LEAVE A REPLY

Please enter your comment!
Please enter your name here