ಹಾಡಹಗಲೇ ಚಿನ್ನದಂಗಡಿ ದರೋಡೆ: ಗನ್​ ತೋರಿಸಿ 5 ನಿಮಿಷದಲ್ಲಿ ಲೂಟಿ

0
10

ಹುಣಸೂರು: ಪಟ್ಟಣದ ಹೃದಯಭಾಗದಲ್ಲೇ ಹಾಡಹಗಲೇ ನಡೆದ ಭಾರೀ ಚಿನ್ನದಂಗಡಿ ದರೋಡೆ ಪ್ರಕರಣ ಸಂಚಲನ ಮೂಡಿಸಿದೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಬೈಪಾಸ್ ರಸ್ತೆಯಲ್ಲಿರುವ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್’ ಚಿನ್ನಾಭರಣ ಅಂಗಡಿಗೆ ನುಗ್ಗಿದ ಐವರು ದರೋಡೆಕೋರರ ಗ್ಯಾಂಗ್, ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿ ಸುಮಾರು 7 ಕೆಜಿ ಚಿನ್ನ ಹಾಗೂ ವಜ್ರಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದೆ.

ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಅಂಗಡಿಗೆ ಪ್ರವೇಶಿಸಿದ ದುಷ್ಕರ್ಮಿಗಳು 2 ಗಂಟೆ 9 ನಿಮಿಷಕ್ಕೆ ಅಂಗಡಿಯಿಂದ ಹೊರಟಿದ್ದು, ಕೇವಲ ಐದು ನಿಮಿಷಗಳಲ್ಲೇ ದರೋಡೆ ನಡೆಸಿರುವುದು ಸಿಸಿ ಕ್ಯಾಮೆರಾ ದೃಶ್ಯಗಳಿಂದ ದೃಢಪಟ್ಟಿದೆ.

ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR

ಎರಡು ಬ್ಯಾಗ್‌ಗಳಲ್ಲಿ ಚಿನ್ನ ತುಂಬಿಸಿಕೊಂಡ ದರೋಡೆಕೋರರು: ದರೋಡೆ ನಡೆಸಲು ಪೂರ್ವಯೋಜನೆಯೊಂದಿಗೆ ಬಂದಿದ್ದ ಆರೋಪಿಗಳು, ಚಿನ್ನ ತೆಗೆದುಕೊಂಡು ಹೋಗಲು ಎರಡು ದೊಡ್ಡ ಚೀಲದಂತಹ ಬ್ಯಾಗ್‌ಗಳನ್ನು ತಂದಿದ್ದರು. ಶೋಕೆಸ್‌ನಲ್ಲಿ ಇಡಲಾಗಿದ್ದ ದೊಡ್ಡ ಗಾತ್ರದ ಚಿನ್ನಾಭರಣಗಳನ್ನು ಕೇವಲ ಎರಡು ನಿಮಿಷಗಳಲ್ಲಿ ಒಂದೆಡೆ ರಾಶಿ ಹಾಕಿ, ನಂತರ ಮತ್ತೆರಡು ನಿಮಿಷಗಳಲ್ಲಿ ಅವುಗಳನ್ನು ಬ್ಯಾಗ್‌ಗಳಲ್ಲಿ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ.

ಮ್ಯಾನೇಜರ್ ಸಮಯಪ್ರಜ್ಞೆಯಿಂದ ಸಂಪೂರ್ಣ ದರೋಡೆ ತಪ್ಪಿತು: ಘಟನೆಯ ವೇಳೆ ಊಟ ಮಾಡುತ್ತಿದ್ದ ಮ್ಯಾನೇಜರ್ ಅಸ್ಗರ್ ಅವರಿಗೆ, ಅಂಗಡಿಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಗಮನಿಸಿದ ಕೇರಳದ ಕೇಂದ್ರ ಕಚೇರಿಯಿಂದ ತಕ್ಷಣ ಮಾಹಿತಿ ನೀಡಲಾಗಿದೆ. ಮಾಹಿತಿ ಸಿಕ್ಕ ತಕ್ಷಣ ಅರ್ಧಕ್ಕೆ ಊಟ ಬಿಟ್ಟು ಓಡಿ ಬಂದ ಮ್ಯಾನೇಜರ್, ಅಂಗಡಿಗೆ ಲಾಕ್ ಮಾಡಲು ಯತ್ನಿಸಿದಾಗ ಆರೋಪಿಗಳು ಫೈರ್ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಟಾಟಾನಗರ್–ಎರ್ನಾಕುಲಂ ಎಕ್ಸ್‌ಪ್ರೆಸ್‌ಗೆ ಬೆಂಕಿ: ಎರಡು ಬೋಗಿಗಳಿಗೆ ಬೆಂಕಿ, ಓರ್ವ ಮೃತ್ಯು

ಅಲ್ಲಿವರೆಗೆ ಯಾವುದೇ ಆತಂಕವಿಲ್ಲದೆ ದರೋಡೆಗೆ ಮುಂದಾಗಿದ್ದ ಗ್ಯಾಂಗ್, ಮ್ಯಾನೇಜರ್ ಸ್ಥಳಕ್ಕೆ ಬಂದ ತಕ್ಷಣ ಆತುರಾತುರವಾಗಿ ಸಿಕ್ಕಷ್ಟು ಚಿನ್ನಾಭರಣಗಳನ್ನು ಲೂಟಿ ಮಾಡಿಕೊಂಡು ಪರಾರಿಯಾಗಿದ್ದು, ಮ್ಯಾನೇಜರ್ ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅಂಗಡಿಯ ಸಂಪೂರ್ಣ ಲೂಟಿ ತಪ್ಪಿದಂತೆ ಆಗಿದೆ.

5 ವಿಶೇಷ ತಂಡಗಳಿಂದ ಬಲೆ – ಬಹುರಾಜ್ಯ ಸಂಪರ್ಕದ ಶಂಕೆ: ಘಟನೆಗೆ ಸಂಬಂಧಿಸಿ ಮೈಸೂರು ಎಸ್‌ಪಿ ನೇತೃತ್ವದಲ್ಲಿ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ನೆಲಮಂಗಲ, ಕೇರಳ ಹಾಗೂ ಯುಎಇಯಲ್ಲಿಯೂ ಈ ಚಿನ್ನಾಭರಣ ಸಂಸ್ಥೆಯ ಶಾಖೆಗಳಿದ್ದು, ಎಲ್ಲಾ ಶಾಖೆಗಳ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: ದಕ್ಷಿಣ ಮೆಕ್ಸಿಕೋದಲ್ಲಿ ರೈಲು ದುರಂತ: 13 ಸಾವು, 98 ಜನರಿಗೆ ಗಾಯ

ದರೋಡೆ ನಂತರ ಚಿನ್ನಾಭರಣ ಅಂಗಡಿಯನ್ನು ಪೊಲೀಸರು ತಾತ್ಕಾಲಿಕವಾಗಿ ಬಂದ್ ಮಾಡಿಸಿದ್ದು, ಸಾರ್ವಜನಿಕರು ಅಂಗಡಿ ಬಳಿ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಅಂಗಡಿ ಮಾಲೀಕ, ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದ್ದು, ಆರೋಪಿಗಳ ಪತ್ತೆಗೆ ತೀವ್ರ ತನಿಖೆ ಮುಂದುವರಿದಿದೆ.

Previous articleವಿಜಯಪುರದಲ್ಲಿ ಕ್ಯಾಂಪಾ ಕೋಲಾ ಘಟಕ ಸ್ಥಾಪನೆಗೆ ವೇಗ