ಮೈಸೂರು: ಹಾಸನ ದುರಂತದಲ್ಲಿ ಮೃತಪಟ್ಟವರಿಗೆ ಪರಿಹಾರ ಹೆಚ್ಚು ಮಾಡಲು ಸಾಧ್ಯವಿಲ್ಲ . ಈ ದುರಂತಕ್ಕೆ ಸರ್ಕಾರ ಹೇಗೆ ಹೊಣೆಯಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಇಂತಹ ಘಟನೆಗಳು ಆದಾಗ ಬಿಜೆಪಿ ಅವರು ಹೆಚ್ಚು ಪರಿಹಾರ ಕೊಟ್ಟಿದ್ದರಾ? ಬಿಜೆಪಿ ಹೆಚ್ಚು ಪರಿಹಾರ ಕೊಡಿ ಎಂದಾಕ್ಷಣ ಕೊಡಲು ಸಾಧ್ಯ ಇಲ್ಲ. ನಿಯಮದ ಪ್ರಕಾರವಾಗಿ ಪರಿಹಾರ ಕೊಡಲಾಗಿದೆ. ನಾವು ಹಣ ಕೊಟ್ಟ ಕೂಡಲೇ ಸತ್ತವರು ವಾಪಾಸ್ ಬರುವುದಿಲ್ಲ. ಆದರೆ, ಕುಟುಂಬದ ನೆರವಿಗೆ ಹಣ ಕೊಡುತ್ತೇವೆ ಅಷ್ಟೆ. ಈ ರೀತಿ ಅಪಘಾತ ನಡೆಯಬಾರದಿತ್ತು ಎಂದರು.
ಹಿಂದೂಗಳ ಟಾರ್ಗೆಟ್ ಮಾಡಿಲ್ಲ: ನಾನು ಕೂಡ ಹಿಂದು. ನನ್ನ ಹೆಸರಿನಲ್ಲೆ ಎರಡು ದೇವರು ಇವೆ. ಸಿದ್ದ ಎಂದರೆ ಈಶ್ವರ. ರಾಮ ಎಂದರೆ ವಿಷ್ಣು. ಪ್ರ‍್ರಚೋದನಕಾರಿ ಭಾಷಣ ಮಾಡಿದವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಸಮಾಜದ ಶಾಂತಿಗೆ ಭಂಗ ತಂದವರ ಮೇಲೆ ಕ್ರಮ ಕೈ ಗೊಳ್ಳುವುದು ತಪ್ಪಲ್ಲ. ಪೊಲೀಸರು ನಿಯಮದ ಪ್ರಕಾರ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಿದ್ದಾರೆ. ಇದರಲ್ಲಿ ರಾಜಕೀಯ ಎಲ್ಲಿದೆ? ಇದನ್ನು ಹಿಂದೂ ಟಾರ್ಗೆಟ್ ಎಂದರೆ ಹೇಗೆ ಹೇಳಿ ಎಂದು ಪ್ರಶ್ನಿಸಿದರು.
ಮತಾಂತರಕ್ಕೆ ಬೆಂಬಲ ಇಲ್ಲ: ಮುಸ್ಲಿಂ ಆಗಿ ಮತಾಂತರ ಆದರೆ ನನ್ನ ಜಾತಿಯೂ ಆ ಧರ್ಮದ ಜೊತೆ ಸೇರುತ್ತೆ ಅಲ್ವಾ? ನಾನೇನೂ ಮುಸ್ಲಿಂ ಆಗಿ ಮತಾಂತರ ಆಗಲ್ಲ. ಸುಮ್ಮನೆ ಉದಾಹರಣೆಗೆ ಇದನ್ನು ಹೇಳ್ದೆ ಅಷ್ಟೆ. ಮತಾಂತರಕ್ಕೆ ನನ್ನ ಬೆಂಬಲ ಇಲ್ಲ. ಮತಾಂತರ ಆಗ ಬೇಡಿ ಎಂದು ಹೇಳುತ್ತೇವೆ. ಹಿಂದೂ ಧರ್ಮದಲ್ಲಿನ ಅಸಮಾನತೆಯಿಂದ ಕೆಲವರು ಮತಾಂತರ ಆಗುತ್ತಾರೆ. ಅದು ಅವರ ಹಕ್ಕು. ಅದನ್ನು ತಪ್ಪಿಸಲು ಆಗಲ್ಲ. ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಮತಗಳು ಅಸಮಾನತೆಗಳು ಇರುತ್ತವೆ. ಅಸಮಾನತೆ ಒಂದೇ ಧರ್ಮಕ್ಕೆ ಸಿಮೀತವಾಗಿಯೂ ಇಲ್ಲ. ಮತಾಂತರ ಆದವರ ಜಾತಿಯೂ ಮುಖ್ಯ. ಹೀಗಾಗಿ ಈ ಜಾತಿಗಳು ಸೃಷ್ಟಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು
.
ಮಣಿಪುರಗೆ ಮೋದಿ ಭೇಟಿ ಸಿಎಂ ವ್ಯಂಗ: ಈ ಹಿಂದೆ ಗಲಾಟೆ ಹಿಂಸೆಯಾದಾಗ ಪ್ರಧಾನಿ ಮೋದಿ ಹೋಗಲಿಲ್ಲ. ಈಗ ಮಣಿಪುರಕ್ಕೆ ಹೋಗುತ್ತಿದ್ದಾರೆ. ಮಣಿಪುರದಲ್ಲಿ ಗಲಭೆ ನಡೆಯುವ ಸಂದರ್ಭದಲ್ಲಿ ಪ್ರಧಾನಿಗಳು ಭೇಟಿನೀಡಿ, ಜನರ ಕಷ್ಟ ಆಲಿಸಬೇಕಿತ್ತು. ಪರಿಸ್ಥಿತಿ ಸುಧಾರಿಸಿದ ಮೇಲೆ ಭೇಟಿ ನೀಡುತ್ತಿದ್ದಾರೆ. ವಿರೋಧಪಕ್ಷದವರ ಒತ್ತಡದಿಂದ ಈಗ ಮಣಿಪುರಕ್ಕೆ ಹೋಗಿದ್ದಾರೆ.
ಮಹದಾಯಿ ಮೇಕೆದಾಟು ಹೊಗೇನಕಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಮಾತನಾಡಬೇಕು. ಅದು ಸ್ಟ್ಯಾಲಿನ್ ಇರಲಿ ಬಿಜೆಪಿ ಸಿಎಂ ಇರಲಿ ಪ್ರಧಾನಿ ಆದವರು ಮಾತನಾಡಬೇಕು ಎಂದರು.
ದಸರಾ ಉದ್ಘಾಟಕರ ವಿಚಾರದಲ್ಲಿ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ ಕೋರ್ಟ್ ಅದನ್ನು ನೋಡಿಕೊಳ್ಳುತ್ತದೆ. ಏನಾಗತ್ತದೆ ಎಂಬುದನ್ನು ಪಿ.ಐ.ಎಲ್ ಸಲ್ಲಿಸಿರುವವರನ್ನು ಕೇಳಿ. ದಸರಾ ಸಾಂಸ್ಕೃತಿಕವಾಗಿ ನಡೆಯುತ್ತಿರುವ ಕಾರ್ಯಕ್ರಮ. ದಸರಾ ಎಲ್ಲರ ಹಬ್ಬ ಒಂದು ಜಾತಿ ಧರ್ಮಕ್ಕೆ ಸೇರಿದ ಹಬ್ಬ ಅಲ್ಲ. ಮುಸ್ಲಿಂ, ಕ್ರಿಸ್ಟಿಯನ್ ಎಲ್ಲರೂ ಬರುತ್ತಾರೆ. ಇದನ್ನು ಬೇರೆ ರೀತಿ ರಾಜಕೀಯವಾಗಿ ವಿರೋಧ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಯಾರೇ ದ್ವೇಷದ ಭಾಷಣ ಮಾಡಿದರೂ ಕ್ರಮ ತೆಗೆದು ಕೊಳ್ಳುತ್ತೀಯೋ ಹಾಗಾದರೆ ಕಾಂಗ್ರೆಸ್ ಮಂತ್ರಿಗಳಿಗೂ ಇದು ಅನ್ವಯವಾಗಬೇಕು ಆಗ ನಿನ್ನನ್ನು ಅಪ್ಪನಿಗುಟ್ಟಿದ ಮಗ ಎನ್ನಬಹುದು ಅದು ಬಿಟ್ಟು ಇದರಲ್ಲಿ ಪಕ್ಷಪಾತ ಮಾಡಿದರೆ ಏನೆನ್ನಬೇಕು.