ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹ ನೀಡಲು ಮನವಿ

0
5

ಮಂಡ್ಯ: ಯುವ ರೈತರ ಮದುವೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವೇ ಮುಂದಾಗಬೇಕು ಎಂಬ ಆಗ್ರಹ ಮಂಡ್ಯದಲ್ಲಿ ಕೇಳಿಬಂದಿದೆ. ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರ ₹5 ಲಕ್ಷ ಪ್ರೋತ್ಸಾಹ ನೀಡುವ ವಿಶೇಷ ಯೋಜನೆ ಜಾರಿಗೊಳಿಸಬೇಕು ಎಂದು ಬಿಜೆಪಿ ಕಾರ್ಯಕರ್ತರ ತಂಡ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದೆ.

‘ಶಾದಿ ಭಾಗ್ಯ’ ಮಾದರಿಯಲ್ಲಿ ರೈತರಿಗೆ ಸಹ ಬೆಂಬಲ ಯೋಜನೆ ಬೇಕು: ಬಿಜೆಪಿ ಕಾರ್ಯಕರ್ತರು ನೀಡಿದ ಮನವಿಯಲ್ಲಿ ಸರ್ಕಾರ ಈಗಾಗಲೇ ‘ಶಾದಿ ಭಾಗ್ಯ’ ಎಂಬ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಅದೇ ಮಾದರಿಯಲ್ಲಿ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹ ಧನ ನೀಡಿದರೆ, ಗ್ರಾಮೀಣ ಸಮಾಜದಲ್ಲಿ ಯುವ ರೈತರ ಮದುವೆ ಸಮಸ್ಯೆಗೆ ಪರಿಹಾರ ಸಿಗುತ್ತದೆ, ಕೃಷಿ ವಲಯಕ್ಕೆ ಹೊಸ ತಲೆಮಾರಿನ ಆಕರ್ಷಣೆ ಕೂಡ ಹೆಚ್ಚುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಶಿರಡಿ ಸಾಯಿಬಾಬಾ ಸನ್ನಿಧಿಗೆ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ

‘ಯುವ ರೈತರಿಗೆ ಹೆಣ್ಣು ಸಿಗದ ಪರಿಸ್ಥಿತಿ’: ಕಳವಳ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮುಖಂಡರು ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಲಾಭ ಕಡಿಮೆ, ತೊಂದರೆ ಹೆಚ್ಚು. ನೀರಿನ ಕೊರತೆ, ಸೂಕ್ತ ಬೆಂಬಲ ಬೆಲೆ ಇಲ್ಲ, ಸಾಲದ ಒತ್ತಡ—ಇವು ರೈತರ ಬದುಕನ್ನು ಮೂರಾ ಬಟ್ಟೆಯನ್ನಾಗಿ ಮಾಡಿವೆ. ಇದರಿಂದ ಕೃಷಿಯಿಂದ ಜೀವನ ಕಟ್ಟಿಕೊಳ್ಳಬಯಸುವ ಯುವ ರೈತರಿಗೆ ಮದುವೆಯಲ್ಲೂ ಸಮಸ್ಯೆ ಎದುರಾಗುತ್ತಿದೆ, ಅನೇಕ ಮನೆಗಳು ಮಗಳಿಗೆ ರೈತರ ಮನೆಯನ್ನು ಆಯ್ಕೆ ಮಾಡಲು ಹಿಂಜರಿಯುತ್ತಿವೆ ಎಂದು ವಿಷಾದಿಸಿದರು.

ನಿರುದ್ಯೋಗ, ಕೈಗಾರಿಕೆಗಳ ಕೊರತೆಗೂ ಕಾಂಗ್ರೆಸ್ ಸರ್ಕಾರದ ನೀತಿಯೇ ಕಾರಣ: ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ನೇಮಕಾತಿಗಳು ತೀರಾ ನಿಂತಂತಾಗಿವೆ. ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರದ ನೀತಿ-ನಿಯಮಗಳ ಅನಿಶ್ಚಿತತೆಯಿಂದಾಗಿ ಖಾಸಗಿ ಕಂಪನಿಗಳು ಕರ್ನಾಟಕಕ್ಕೆ ಬರುವುದೇ ಕಡಿಮೆಯಾಗಿದೆ ಎಂದರು.

ಇದನ್ನೂ ಓದಿ: ಡಿಸಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

Previous articleಹುಬ್ಬಳ್ಳಿಗೆ ಆಗಮಿಸಿದ ದಲೈ ಲಾಮಾ: ಜಿಲ್ಲಾಧಿಕಾರಿಯಿಂದ ಸ್ವಾಗತ