ಕೊಪ್ಪಳ: ಕಾಂತಾರ-2 ಯಶಸ್ಸಿನ ನಟ ರಿಷಬ್ ಶೆಟ್ಟಿ ಅಭಿನಯದ ಚಿತ್ರ `ಜೈ ಹನುಮಾನ್’ ಹನುಮ ಜನ್ಮಭೂಮಿಯಲ್ಲಿ ಇಂದು ಸೆಟ್ ಏರಿದೆ.
ತೆಲುಗು ಸಿನಿಮಾ ಇಂಡಸ್ಟ್ರಿಯ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಯಶಸ್ಸಿನ ನಂತರ ‘ಜೈ ಹನುಮಾನ್’ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಚಿತ್ರವನ್ನು ಪ್ರಶಾಂತ್ ವರ್ಮ ನಿರ್ದೇಶಿಸುತ್ತಿದ್ದಾರೆ. ಈ ಹಿನ್ನಲೆ ಅಂಜನಾದ್ರಿಯ ಕಡಿದಾದ ಬೆಟ್ಟವನ್ನೇರಿ ರಿಷಬ್ ಶೆಟ್ಟಿ ಹನುಮನ ದರ್ಶನ ಪಡೆದರು. ಇವರಿಗೆ ಪತ್ನಿ ಪ್ರಗತಿ ಶೆಟ್ಟಿ ಸಾಥ್ ನೀಡಿದರು.
ಇದನ್ನೂ ಓದಿ: IPL 2026: ಧೋನಿ ಅಭಿಮಾನಿಗಳಿಗೆ ಗುಡ್‌ನ್ಯೂಸ್
ರಿಷಬ್ ಶೆಟ್ಟಿ ಪತ್ನಿಯೊಂದಿಗೆ ಬೆಟ್ಟವೇರುತ್ತಿದ್ದಂತೆ ಬಳಿಕ ಇಡೀ ಚಿತ್ರತಂಡವೂ ಮುಹೂರ್ತದ ಪೂಜೆಯಲ್ಲಿ ಭಾಗಿಯಾಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟನನ್ನು ನೋಡಿ, ಸಂಭ್ರಮಿಸಿದರು. ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು.
ಎರಡು ವರ್ಷಗಳ ಹಿಂದೆ ಹನುಮಾನ ಚಿತ್ರ ಯಶಸ್ಸು ಕಂಡಿತ್ತು. ಇದೀಗ ಎರಡು ವರ್ಷಗಳ ಬಳಿಕ ರಿಷಬ್ ಶೆಟ್ಟಿ ಹನುಮನಾಗಿ `ಜೈ ಹನುಮಾನ್’ ಚಿತ್ರದ ಮುಹೂರ್ತ ನೆರವೇರಿದ್ದು, ಇದೇ ವರ್ಷ ಈ ಚಿತ್ರತೆರೆಗೆ ಬರಲಿದೆ ಎನ್ನಲಾಗಿದೆ.























