Home Advertisement
Home ನಮ್ಮ ಜಿಲ್ಲೆ ಕೊಪ್ಪಳ ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ: ಅಪರಾಧಿಗಳು ಬಳ್ಳಾರಿ ಜೈಲಿಗೆ ಶಿಫ್ಟ್

ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ: ಅಪರಾಧಿಗಳು ಬಳ್ಳಾರಿ ಜೈಲಿಗೆ ಶಿಫ್ಟ್

0
25

ಕೊಪ್ಪಳ: ಅತ್ಯಾಚಾರ ಆರೋಪ ಸಾಬೀತಾಗಿ ಮೂವರು ಅಪರಾಧಿಗಳಿಗೆ ನ್ಯಾಯಾಲಯವು ಮರಣದಂಡನೆಗೆ ಆದೇಶಿಸಿದ ಬೆನ್ನಲ್ಲೇ ಅವರನ್ನು ನಗರದ ಜಿಲ್ಲಾ ಕಾರಾಗೃಹದಿಂದ ಬಳ್ಳಾರಿಯ ಕೇಂದ್ರೀಯ ಕಾರಾಗೃಹಕ್ಕೆ ಮಂಗಳವಾರ ಸ್ಥಳಾಂತರಿಸಲಾಯಿತು.

ಅಪರಾಧಿಗಳಾದ ಗಂಗಾವತಿಯ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿಕುಮಾರ್ ಹಾಗೂ ಶರಣಬಸವರಾಜಗೆ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ಕೋರ್ಟ್ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.

ಇವರು ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ 2025ರ ಮಾರ್ಚ್‌ನಲ್ಲಿ ಇಸ್ರೇಲ್ ಮಹಿಳೆ, ಸ್ಥಳೀಯ ಹೋಂಸ್ಟೇ ಮಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರಲ್ಲದೇ ರಕ್ಷಣೆಗೆ ಹೋದವನ ಕೊಲೆ ಮಾಡಿದ್ದರು.

ನ್ಯಾಯಾಲಯದ ಆದೇಶ ಬಂದ ಬಳಿಕ ಅಲ್ಲಿನ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸೋಮವಾರ ಮಧ್ಯರಾತ್ರಿ ಅಪರಾಧಿಗಳನ್ನು ಕೊಪ್ಪಳದ ಕಾರಾಗೃಹಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಕರೆತರಲಾಗಿದೆ. ಮೂವರು ಅಪರಾಧಿಗಳನ್ನೂ ಮಂಗಳವಾರ ಬೆಳಿಗ್ಗೆ ಬಳ್ಳಾರಿ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.

Previous articleJEE Main ಫಲಿತಾಂಶ: ಕರ್ನಾಟಕಕ್ಕೆ ಹೆಮ್ಮೆ ತಂದ ವಿಷ್ಣು ಸಾಯಿ ತೇಜ
Next articleವಾಸ್ಕೋ ಡ ಗಾಮಾ – ಕುಲೆಮ್ ಡೆಮು ರೈಲುಗಳ ಸಂಚಾರ ರದ್ದು