Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಸುತ್ತಿಗೆಯಿಂದ ಹೊಡೆದು ಪತ್ನಿ ಕೊಲೆ: ಪತಿ-ಅತ್ತೆ ಬಂಧನ

ಸುತ್ತಿಗೆಯಿಂದ ಹೊಡೆದು ಪತ್ನಿ ಕೊಲೆ: ಪತಿ-ಅತ್ತೆ ಬಂಧನ

0
4

ಕೊಪ್ಪಳ(ಕುಕನೂರು): ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಪತಿ ಹಾಗೂ ಆತನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾನ್ವಿಕಾ ಕೊಲೆಯಾದ ಮಹಿಳೆ. ಇತ್ತೀಚೆಗೆ ಈ ಘಟನೆ ನಡೆದಿದ್ದು, ಪತಿ ಅವಿನಾಶ್ ಹಾಗೂ ಆತನ ತಾಯಿ ಚೆನ್ನಮ್ಮ ಅವರನ್ನು ಬಂಧಿಸಲಾಗಿದೆ.

ಘಟನೆ ಹಿನ್ನೆಲೆ: ಕೊಲೆಯಾದ ಮಾನ್ವಿಕಾ ಮೂಲತಃ ದೆಹಲಿ ನಿವಾಸಿ. ಆರೋಪಿ ಅವಿನಾಶ್ ನಾಲ್ಕೈದು ವರ್ಷದ ಹಿಂದೆ ಇಂಗ್ಲಿಷ್ ಕಲಿಯಲು ತುಮಕೂರಿಗೆ ಹೋಗಿದ್ದ. ಅಲ್ಲಿ ಮಾನ್ವಿಕಾಳನ್ನು ಪ್ರೀತಿಸಿ, ಮದುವೆಯಾಗಿ ಕುಕನೂರು ತಾಲೂಕಿನ ಸೋಂಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದ. ಪತ್ನಿ ಫೋನ್‌ನಲ್ಲಿ ಮಾತನಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರ ಮಧ್ಯ ಗಲಾಟೆಯಾಗಿದೆ. ಅದು ವಿಕೋಪಕ್ಕೆ ತಿರುಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೆ ಅವಿನಾಶ್ ತಾಯಿ ಚೆನ್ನಮ್ಮ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.