ಕೋಲಾರ: ಕರ್ನಾಟಕದ ಪ್ರಖ್ಯಾತ ಬಾಡಿ ಬಿಲ್ಡರ್ ರೂಪದರ್ಶಿ ತಮ್ಮ ನೆಲದಲ್ಲಿ ಅಪರಿಚಿತರಾದರೂ ವಿದೇಶಗಳಲ್ಲಿ ಖ್ಯಾತಿ ಹೊಂದಿದ್ದ 42 ವರ್ಷದ ಸುರೇಶ್‌ಕುಮಾರ್ ಅಮೆರಿಕದ ಫ್ಲೋರಿಡಾ-ಟೆಕ್ಸಾಸ್ ನಗರದ ಮಧ್ಯೆ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕೋಲಾರದ ಗಾಂಧಿನಗರದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಎಮ್ಮೆ ಮೇಯಿಸುವ ಕಾಯಕ ಮಾಡುತ್ತಲೆ ತಮ್ಮ ದೇಹವನ್ನು ಹುರಿಗಟ್ಟಿಸಿ ಜಗತ್ತಿನಲ್ಲೇ ವಿಸ್ಮಯ ಮೂಡಿಸಿದ್ದರು.
ಬೆಂಗಳೂರಿನ ಕನ್ನಡದ ಪ್ರಖ್ಯಾತ ಚಿತ್ರ ನಟ-ನಟಿಯರಿಗೆ ಫಿಟ್ನೆಸ್ ತರಬೇತುದಾರನಾಗಿ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟಿದ್ದ ಸುರೇಶಕುಮಾರ್ ದೆಹಲಿ ಮೂಲದ ಯುವತಿಯನ್ನು ಮದುವೆಯಾಗಿದ್ದರು.
ಮೂರು ದಿನಗಳ ಹಿಂದೆ ಫ್ಲೋರಿಡಾದಿಂದ ಟೆಕ್ಸಾಸ್ ನಗರಕ್ಕೆ ತೆರಳುವ ವೇಳೆ ಅಪಘಾತವಾಗಿದೆ. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿ
ತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಅವರ ಸಮೀಪ ಬಂಧು ಕೋಲಾರ ಗಾಂಧಿನಗರದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ತಿಳಿಸಿದ್ದಾರೆ.