Rain Alert: ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

0
81

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಾರಿ ಮಳೆ ಆಗುವ ಸಾಧ್ಯತೆ ಇದೆ. ಆಗಸ್ಟ್‌ನಿಂದ ಮುಂಗಾರಿನ 2ನೇ ಅವಧಿ ಆರಂಭವಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಕಡಿಮೆ ಆಗಿಲ್ಲ. ಮಳೆಯ ಅಬ್ಬರ ಜೋರಾಗಿದ್ದು, ಮುಂದಿನ 5 ದಿನಗಳ ಕಾಲ ಗಾಳಿಯೊಂದಿಗೆ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ರವಿವಾರ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಇದು ಬೇರೆ ಜಿಲ್ಲೆಗಳಿಗೂ ವಿಸ್ತರಿಸಿಕೊಂಡಿದೆ. ರಾಜ್ಯದ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕು ಗೊಂಡಿದ್ದು. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸಕ್ರಿಯವಾಗಿದೆ. ಕರಾವಳಿಯಲ್ಲಿ ದುರ್ಬಲವಾಗಿದೆ. ಉತ್ತರ ಒಳನಾಡಿನ ಬಹುತೇಕ ಕಡೆ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಕರಾವಳಿಯ ಕೆಲ ಪ್ರದೇಶಗಳಲ್ಲಿ ಮಳೆಯಾಗಿದೆ.

ಮುಂಗಾರು ಋತುವಿನ ಮೊದಲಾರ್ಧದಲ್ಲಿ(ಜೂನ್ ಮತ್ತು ಜುಲೈ) ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಉಂಟಾಗಿದ್ದರಿಂದ ಕೆಲವು ರಾಜ್ಯಗಳು, ವಿಶೇಷವಾಗಿ ಹಿಮಾಚಲ ಪ್ರದೇಶದಲ್ಲಿ ಹಠಾತ್ ಪ್ರವಾಹ ಉಂಟಾಗಿತ್ತು. ಆಗಸ್ಟ್‌ನಲ್ಲಿ ಆರಂಬಾವಾಗುವ ಮುಂಗಾರಿನ ದ್ವಿತೀಯಾರ್ಧದ ಮಳೆಯು ದೇಶಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿತ್ತು. ಆಗಸ್ಟ್‌ 4 ರಿಂದ ಮುಂಗಾರಿನ 2ನೇ ಅವಧಿ ಆರಂಭ ಆಗಿದ್ದು ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದೆ, ಮುಂಗಾರಿನ 2ನೇ ಅವಧಿ ಆರಂಭದಿಂದಲೆ ಇಂದಿನವರೆಗೂ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.

ಹವಾಮಾನ ವರದಿಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಅತಿ ಹೆಚ್ಚು 12 ಸೆಂಟಿ ಮೀಟರ್ ಮಳೆಯಾಗಿದ್ದು. ಉಳಿದಂತೆ ಕಲಬುರಗಿ ಜಿಲ್ಲೆ ಅಫ್ಜಲ್ ಪುರದಲ್ಲಿ 10 ಸೆಂಟಿ ಮೀಟರ್ ಮಳೆಯಾಗಿದೆ, ಕೊಪ್ಪಳ ಜಿಲ್ಲೆ ತಾವರಗೇರಾ 9 ಸೆಂಟಿ ಮೀಟರ್ ಮಳೆಯಾಗಿದೆ, ಬರಗೂರು 8ಸೆಂಟಿ ಮೀಟರ್ ಮಳೆಯಾಗಿದೆ, ಕೆರೂರು, ಕೆಂಭಾವಿ, ಬೀಳಗಿ 7 ಸೆಂಟಿ ಮೀಟರ್ ಮಳೆ ಆಗಿದೆ, ಹುನಗುಂದ, ಚಿಂಚೋಳಿ, ಬೆಳ್ಳಟ್ಟಿ, ತಿಡಗುಂದಿ ಆಗ್ರೋ, ಮಂಟಾಳ, ಹೊಸಕೋಟೆ, ಗಂಗಾವತಿಯಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ.

ಸೋಮವಾರ ಆಗಸ್ಟ್‌ 11 ರಿಂದ ರಾಜ್ಯದ ಒಳನಾಡು ಭಾಗದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಹುತೇಕ ಬಿರುಸಿನ ಮಳೆ ಆಗಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಭಾರಿ ಮಳೆ ಆಗಲಿದೆ. ಗರಿಷ್ಠ 115 ಮಿಲಿ ಮೀಟರ್ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ಬಹುತೇಕ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಸೂಚನೆ ನೀಡಿದೆ.

ಮುನ್ಸೂಚನೆಯಂತೆ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇದೇ ಬರುವ ಆಗಸ್ಟ್‌ 16ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ, ಹಲವೆಡೆ ಹಗುರ ಅಥವಾ ಗುಡುಗು ಸಹಿತ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ.

Previous articleನಮ್ಮ ಮೆಟ್ರೋ ಯೋಜನೆ: ರಾಜ್ಯದ ಪಾಲೇ ಹೆಚ್ಚು
Next articleNamma Metro Yellow Line: ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೋ ರೈಲು ವೇಳಾಪಟ್ಟಿ, ದರ

LEAVE A REPLY

Please enter your comment!
Please enter your name here