ಎಂಇಎಸ್ ಪುಂಡಾಟಿಕೆಗೆ ಬ್ರೆಕ್ ಹಾಕುವಂತೆ ಆಗ್ರಹ

0
110

ಬೆಳಗಾವಿ: ‌ಗಡಿನಾಡು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟ ಇದ್ದೇ ಇರುತ್ತೆ. ಇದಕ್ಕೆ ಕಡಿವಾಣ ಹಾಕಲು ಕನ್ನಡ ಪರ ಸಂಘಟನೆಗಳು ಕೂಡ ಹೋರಾಟ ಮಾಡುತ್ತಲೇ ಇರುತ್ತವೆ. ಎಂಇಎಸ್‌ ಆಟ ನಡೆಯದಂತೆ ಕನ್ನಡ ಪ್ರೇಮಿಗಳ ಅನೇಕ ಸಂಘಟನೆಗಳು ಇಲ್ಲಿ ಹುಟ್ಟಿಕೊಂಡಿದೆ. ಆದರೆ, ಈಗ ಮತ್ತೆ ಎಂಇಎಸ್‌ ಕನ್ನಡ ಕಡ್ಡಾಯ ಅನುಷ್ಠಾನ ಹಿಂಪಡೆಯಲು ಒತ್ತಾಯ ಮಾಡಿದೆ.

ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಎಂಇಎಸ್ ಸದಸ್ಯರು ಮಂಗಳವಾರ ನೇರವಾಗಿ ಬೆಳಗಾವಿ ಮೇಯರ್‌ ಮಂಗೇಶ್ ಪವಾರ್ ಅವರನ್ನು ಭೇಟಿ ಮಾಡಿ ಕನ್ನಡ ಕಡ್ಡಾಯ ಅನುಷ್ಠಾನ ಹಿಂಪಡೆಯಲು ಒತ್ತಾಯ ಮಾಡಿದ್ದಾರೆ.

ಗಡಿನಾಡ ಬೆಳಗಾವಿಯಲ್ಲಿ ಮತ್ತೇ ಎಂಇಎಸ್ ಪುಂಡಾಟಿಕೆಗೆ ಬ್ರೆಕ್ ಹಾಕುವ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕ ಸೇನೆ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದೆ. ಸಂಘಟನೆ ಮುಖಂಡ ಮಹಾದೇವ ತಳವಾರ ನೇತೃತ್ವದಲ್ಲಿ ಈ ಕುರಿತಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು ಸೇರಿದಂತೆ ಮೇಯರ್, ಉಪಮೇಯರ್‌ಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನ ಸರಿಯಾಗಿ ಉತ್ತಮವಾಗಿ ನಡೆದಿದೆ. ಮೇಯರ್, ಉಪಮೇಯರ್ ಅವರು ಬಳಸುವ ಪಾಲಿಕೆಯ ವಾಹನದ ಮೇಲೆ ಸಂಪೂರ್ಣ ಕನ್ನಡ ನಂಬರ ಪ್ಲೇಟ, ನಾಮಫಲಕವನ್ನು ಅಳವಡಿಸಲಾಗಿದೆ. ಇದು ಹೆಮ್ಮೆಯ ಸಂಗತಿ ಎಂದು ಸಂಘಟನೆ ಮುಖಂಡ ಮಹಾದೇವ ತಳವಾರ ಅವರು ಹೇಳಿ ಅವರನ್ನು ಅಭಿನಂದಿಸಿದರು.

2022ರ ಸರ್ಕಾರದ ಸುತ್ತೋಲೆ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ. ಆದರೆ, ಗಡಿನಾಡಲ್ಲಿ ಎಂಇಎಸ್ ಅದಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಮೇಯರ್ ಮಂಗೇಶ್ ಪವಾರ್ ಅವರ ವಾಹನದ ಮೇಲೆ ಕನ್ನಡ ಅಂಕಿಗಳು ಹಾಗೂ ಬೋರ್ಡ್‌ ಅಳವಡಿಸಲಾಗಿದೆ ಎಂಬ ಕಾರಣಕ್ಕೆ ಎಂಇಎಸ್ ಸದಸ್ಯರು ನಿನ್ನೆ ನೇರವಾಗಿ ಅವರನ್ನು ಭೇಟಿ ಮಾಡಿ ಕನ್ನಡ ಕಡ್ಡಾಯ ಅನುಷ್ಠಾನ ಹಿಂಪಡೆಯಲು ಒತ್ತಾಯ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು “ಕನ್ನಡವೇ ನಮ್ಮ ನಾಡು, ನುಡಿ. ಅದನ್ನು ಹಿಂಪಡೆಯಲು ಯಾರಿಗೂ ಅವಕಾಶವಿಲ್ಲ” ಎಂದು ಎಚ್ಚರಿಸಿದ್ದಾರೆ.

Previous articleಜುಲೈ 19ರ ಮೈಸೂರಿನ ಕಾಂಗ್ರೆಸ್ ಸಮಾವೇಶ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಲ್ಲ!
Next articleಜುಲೈ 21ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ

LEAVE A REPLY

Please enter your comment!
Please enter your name here