ರಾಮ್ ಜಿ ಯೋಜನೆ ತಂದು ಬಡ ಜನರನ್ನು ಗುಲಾಮಗಿರಿಗೆ ತಳ್ಳುವುದು ಮೋದಿ ಹುನ್ನಾರ : ಖರ್ಗೆ ಆರೋಪ

0
5

ಸಂ.ಕ.ಸಮಾಚಾರ ಕಲಬುರಗಿ‌ : ಮೋದಿ ಸರ್ಕಾರ ಮನ್‌ರೇಗಾ ಯೋಜನೆಯನ್ನು ರದ್ದುಗೊಳಿಸಿ ಸದ್ಯ ಜಿ ರಾಮ್ ಜಿ ಯೋಜನೆ ತಂದು ಬಡ ಜನರನ್ನು ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸತ್ ಅದಿವೇಶನದಲ್ಲಿ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಲಾಯಿತು, ಅನೇಕ ಬೀಲ್‌ಗಳನ್ನು ಪಾಸ್ ಮಾಡಲಾಯಿತು. ಆದರೆ, ಮನ್‌ರೇಗಾ ಬಿಲ್ ಬಗ್ಗೆ ಇನ್ನು ಬಹಳ ಚರ್ಚೆಯಾಗಬೇಕಿತ್ತು. ಆದರೆ, ನಮಗೆ ಅವರು ಅವಕಾಶ ನೀಡಿಲ್ಲವೆಂದು ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

ಮನ್‌ರೇಗಾ ಯೋಜನೆ ತೆಗೆದು ಬೇರೆ ಹೆಸರಿನಲ್ಲಿ ಯೋಜನೆ ತರುತ್ತಿದ್ದಾರೆ. ಜಿ ರಾಮ್‌ಜಿ ಬಿಲ್ ತರಾತುರಿಯಲ್ಲಿ ತಂದಿದ್ದಾರೆ. ಇದರಿಂದ ದೇಶದ ಬಡ ಜನರಿಗೆ ತೊಂದರೆಯಾಗುತ್ತಿದೆ. ಮೊದಲು ಎಲ್ಲಾ ಸಮಯದಲ್ಲಿ ಕೂಲಿ ಸಿಗುತ್ತಿತ್ತು. ಆದರೆ ಆ ಅವಕಾಶವನ್ನು ಇವಾಗ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಮೋದಿಯವರು ರೈಟ್ ಟು ವಕ್೯ ತೆಗೆದಿದ್ದಾರೆ. ಇದರ ವಿರುದ್ಧ ನಾವು ದೇಶಾದ್ಯಂತ ಹೋರಾಟ ಮಾಡುತ್ತೇವೆ ಎಂದರು.

ಬಡಜನರಿಗೆ ಇದೀಗ 60 ದಿನ ಕೂಲಿ ಕೆಲಸ ಇಲ್ಲ ಎಂದಿದ್ದಾರೆ. ಆ ದಿನಗಳಲ್ಲಿ ಬಡ ಜನ ಏನು ಮಾಡಬೇಕು. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಆಗುತ್ತಿದೆ. ನರೇಗಾ ಇದ್ದಿದ್ದಕ್ಕೆ ಕರೋನಾ ಕಾಲದಲ್ಲಿ ಬಡ ಜನರ ಬದುಕಿದ್ದರು. ನಾವು ಬಡ ಜನರಿಗೆ ಕೊಟ್ಟ ಗ್ಯಾರೆಂಟಿ ಯೋಜನೆಗಳನ್ನು ತೆಗೆಯುತ್ತಿದ್ದಾರೆ. ಮನ್ ರೇಗಾ ಯೋಜನೆಗೆ ಮಹಾತ್ಮಗಾಂದಿ ಹೆಸರಿತ್ತು. ಮಹಾತ್ಮಾಗಾಂದಿ ಫೋಟೋ ಇಟ್ಟು ಪೂಜೆ ಮಾಡುತ್ತಾರೆ ಅವರ ಹೆಸರಿದೆ ಎಂಬ ಕಾರಣಕ್ಕೆ ಅವರಿಗೆ ಅದರಿಂದ ಏನ್ ತೊಂದರೆಯಾಗಿತ್ತಿತ್ತು ಗೊತ್ತಿಲ್ಲ ಜಿ ರಾಮ್ ಜಿ ಇಟ್ಟು ಏನ್ ಸಾಧನೆ ಮಾಡುತ್ತಿದ್ದಾರೆ. ಮೋದಿಯವರು ಕ್ಷುಲಕ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿಯ ಆರಂಭ: ನಿಮ್ಮೂರಲ್ಲೇ ಕನಸು ನನಸಾಗಿಸಿಕೊಳ್ಳಿ

ಮೋದಿ ಸರ್ಕಾರ ಮೊದಲು ಯುಪಿಎ ಸರ್ಕಾರದ ಯೋಜನೆಗಳನ್ನು ವಿರೋಧ ಮಾಡುತ್ತದೆ. ಮತ್ತೆ ಅದೇ ಯೋಜನೆಗಳನ್ನು ಹೆಸರು ಬದಲು ಮಾಡಿ ಜಾರಿಗೆ ತರುತ್ತದೆ. ಕೇಂದ್ರ ಸರ್ಕಾರಕ್ಕೆ ಯಾವುದೇ ದೂರದೃಷ್ಟಿ ಇಲ್ಲ. ಕೇಂದ್ರ ಸರ್ಕಾರ ಸಂವಿಧಾನ ವಿರೋದಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಂಪ್‌ಗೆ ಹೆದರಿ ಅಟಾಮಿಕ್ ಎನರ್ಜಿ ಬಿಲ್ ತಂದಿದ್ದಾರೆ. ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ ಖರ್ಗೆ ಅವರು, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ರಾಜ್ಯ ನಾಯಕರೇ ಬಗೆ ಹರಿಸಿಕೊಳ್ಳುತ್ತಾರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗೊಂದಲ ಸೃಷ್ಟಿ ಹೈಕಮಾಂಡ್ ಮಾಡಿಲ್ಲ. ರಾಜ್ಯದ ನಾಯಕರು ಈ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದನ್ನೂ ಓದಿ: “ಯುದ್ಧಕ್ಕೆ ನಾವು ಸಿದ್ಧ” – ಹುಬ್ಬಳ್ಳಿ ವೇದಿಕೆಯಿಂದ ವಿರೋಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆ

ಕಾಂಗ್ರೆಸ್ ಯಾರೋ ಒಬ್ಬ ನಾಯಕನಿಂದ ಬೆಳಿದಿದ್ದಲ್ಲ ಎಂದು ಮಾರ್ಮಿಕವಾಗಿ ಹೇಳಿದ ಅವರು, ಯಾರು ನನ್ನಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಹೇಳುವುದು ಮತ್ತು ನಾನೇ ಪಕ್ಷ ಕಟ್ಟಿದ್ದೆನೆಂದು ಹೇಳಬಾರದು ಎಂದು ಕಿವಿಮಾತು ಹೇಳಿದ ಅವರು, ಕಾರ್ಯಕರ್ತರೇ ಪಕ್ಷವನ್ನು ಕಟ್ಟಿದ್ದಾರೆ. ಪಕ್ಷ ಅಂದ ಮೇಲೆ ಎಲ್ಲರ ಪಾತ್ರವೂ ಇರುತ್ತದೆ ಕೆಲ ಕಾರ್ಯಕರ್ತರು ಕೂಡ ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಎಂದರು.

ರಾಜ್ಯದಲ್ಲಿನ ನಾಯಕತ್ವದ ಬದಲಾವಣೆಯ ಗೊಂದಲ ವಿಚಾರವಾಗಿ ಚಾಟಿ ಬೀಸಿದ ಮಲ್ಲಿಕಾರ್ಜುನ ಖರ್ಗೆ ಅವರು ಡಿಸಿಎಂ ಡಿ.ಕೆ. ಶಿವುಕುಮಾರ ಅವರು 23ರಂದು ದೆಹಲಿ ಭೇಟಿ ನೀಡಲಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಂಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಖಾರವಾಗಿ ಹೇಳಿದರು.

ಇನ್ನು ರಾಜ್ಯ ಕಾಂಗ್ರೆಸ್ ಗೊಂದಲ ಬಗೆಹರಿಸುವಂತೆ ಸುದರ್ಶನ ಅವರು ಬರೆದ ಪತ್ರದ ವಿಚಾರವಾಗಿ ಮಾತನಾಡಿದ ಖರ್ಗೆ ಅವರು, ನನ್ನ ಬಳಿ ಯಾವ ಪತ್ರವೂ ಬಂದಿಲ್ಲ. ಪತ್ರ ಕೈ ಸೇರಿದ ಮೇಲೆ ನೋಡುತ್ತೇನೆ, ಅವರು ಯಾವ ಉದ್ದೇಶದಿಂದ ಪತ್ರ ಬರೆದಿದ್ದಾರೆ, ಯಾವ ಸಲಹೆ ನೀಡಿದ್ದಾರೆಂದು ನೋಡುತ್ತೇನೆಂದು ಹೇಳಿದರು.

Previous article“ಯುದ್ಧಕ್ಕೆ ನಾವು ಸಿದ್ಧ” – ಹುಬ್ಬಳ್ಳಿ ವೇದಿಕೆಯಿಂದ ವಿರೋಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆ