ಬೆಂಗಳೂರು: ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 83.52 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದ್ದು, ರಾಜ್ಯ ಮುಜರಾಯಿ ಸಚಿವರು ಕೇಂದ್ರದೊಂದಿಗೆ ಮಾತನಾಡಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಿಸಬೇಕೆಂದು ಮೇಲ್ಮನೆ ಸದಸ್ಯ ಎಂ. ನಾಗರಾಜು ಒತ್ತಾಯಿಸಿದರು.
ಶೂನ್ಯವೇಳೆಯಲ್ಲಿ ಸಂಯುಕ್ತ ಕರ್ನಾಟಕ' ದಿನಪತ್ರಿಕೆ ಪ್ರಕಟಿಸಿದಶ್ರೀ ದತ್ತ ಕ್ಷೇತ್ರಕ್ಕೆ ದೊರೆಯದ ಕೇಂದ್ರದ ಪ್ರಸಾದ’ ಎಂಬ ಶೀರ್ಷಿಕೆಯ ವರದಿಯನ್ನು ಉಲ್ಲೇಖಿಸಿ ಸದನದ ಗಮನಕ್ಕೆ ತಂದ ಅವರು, ಮುಜರಾಯಿ ಇಲಾಖೆಗೊಳಪಡುವ ಈ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಪ್ರಸಾದ ಯೋಜನೆಯಡಿಯಲ್ಲಿ ಕಳೆದ 2023ರಲ್ಲಿ ಕೇಂದ್ರ ಬಜೆಟ್‌ನಲ್ಲಿ ಈ ದೇವಸ್ಥಾನ ಆಯ್ಕೆಯಾಗಿತ್ತು. ಇಲ್ಲಿಯವರೆಗೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಬಂದಿಲ್ಲ. ಕೇಂದ್ರ ಸಚಿವರೊಂದಿಗೆ ಚರ್ಚಿಸಿ ನಿಗದಿಯಾದ ಅನುದಾನವನ್ನು ಕೊಡಿಸಬೇಕು ಎಂದರು.






















