ಸಿಎಂ,‌ಡಿಸಿಎಂ ಕುರ್ಚಿ ಕಚ್ಚಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತ : ಶೋಭಾ ಕರಂದಾಜ್ಲೆ

0
2

ಸಂ.ಕ. ಸಮಾಚಾರ ಕಲಬುರಗಿ: ಸಿಎಂ‌‌‌ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಕಚ್ಚಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ ಆರೋಪಿಸಿದರು.

ಮಂಗಳವಾರ ನಗರದಲ್ಲಿ ಮಾಧ್ಯಮಗೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಬಗ್ಗೆ ಚರ್ಚೆ ಆಗುತ್ತಿಲ್ಲ, ಎರಡೂವರೆ ವರ್ಷ ಯಾರಿರಬೇಕು, ಮತ್ತೆರಡು ವರ್ಷ ಯಾರಿರಬೇಕು ಎಂಬುದೇ ಚರ್ಚೆ ನಡೆದಿದೆ ಎಂದರು.

ಇದನ್ನೂ ಓದಿ: ವಿಜಯ್ ಹಜಾರೆ ನಾಳೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರ

ಇಬ್ಬರು ಕುರ್ಚಿ ಕಚ್ಚಾಟದಲ್ಲಿ ಬಿಜಿಯಾಗಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ. ಆ ಯೋಜನೆಗಳು ಸಹ ಜನರಿಗೆ ಸರಿಯಾಗಿ ತಲುಪುತ್ತಿಲ್ಲ, ನವೆಂಬರ್ ಕಾಂತ್ರಿಯಾಗಲಿ, ಏನಾದರೂ ಆಗಲಿ, ಆದರೆ, ರಾಜ್ಯದ ಜನರ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ ನಾನೆ ಮುಂದಿನ ಸಿಎಂ,5 ವರ್ಷ ಆಡಳಿತ ನಾನೆ ಮಾಡುತ್ತೇನೆಂದು, ಡಿಕೆಶಿ ಅಂತಾರೆ ಎರಡೂವರೆ ವರ್ಷ ಅಗ್ರಿಮೆಂಟ್ ಆಗಿದೆವೆಂದು,
ಮಲ್ಲಿಕಾರ್ಜುನ ‌ಖರ್ಗೆಯವರು ಅಲ್ಲೆ ಬಗೆಹರಿಸಿಕೊಳ್ಳಿ ಅಂತಾರೆ, ಹಾಗಾದರೆ ಹೈ ಕಮಾಂಡ್ ಯಾರು ?, ದೆಹಲಿಯಲ್ಲಿದೆಯೋ ಅಥವಾ ಕರ್ನಾಟಕದಲ್ಲಿ ಇದೆಯೋ.? ಸಿದ್ದರಾಮಯ್ಯ ಹೈಕಮಾಂಡೋ ಅಥವಾ ಡಿಕೆಶಿ ಹೈಕಮಾಂಡೋ.? ಇದನ್ನು ಕಾಂಗ್ರೆಸ್ ಪಕ್ಷವೇ ನಿರ್ಧಾರ ಮಾಡಬೇಕು ಎಂದರು.

Previous articleಎಸ್ಸೆಸ್ಸೆಂ ಆಪ್ತ ಸೇರಿ ನಾಲ್ವರು ಡ್ರಗ್ಸ್ ಪ್ರಕರಣದಲ್ಲಿ ಬಂಧನ