ಹುಬ್ಬಳ್ಳಿ: ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ, ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲನ್ನು ಚಾಮರಾಜನಗರದತನಕ ತಾತ್ಕಾಲಿಕವಾಗಿ ವಿಸ್ತರಿಸಿದೆ.
ರೈಲು ಸಂಖ್ಯೆ 07339/07340 ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲನ್ನು ಚಾಮರಾಜನಗರದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಿದೆ. ಇದರಿಂದಾಗಿ ಈ ಭಾಗದ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗಲಿದೆ.
ಈ ವಿಶೇಷ ರೈಲು ಸೇವೆಯ ವಿಸ್ತರಣೆಯಿಂದಾಗಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರ ನಡುವೆ ನೇರ ಸಂಪರ್ಕ ಕಲ್ಪಿಸಲಾಗಿದ್ದು, ದಸರಾ ಸಂದರ್ಭದಲ್ಲಿ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ರೈಲು ವೇಳಾಪಟ್ಟಿ: ರೈಲು ಸಂಖ್ಯೆ 07339 ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ವಿಶೇಷ ರೈಲು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗೆ (ಒಟ್ಟು 07 ಟ್ರಿಪ್‌ಗಳು) ಚಾಮರಾಜನಗರದವರೆಗೆ ವಿಸ್ತರಣೆಯಾಗಲಿದೆ.
ರೈಲು ಸಂಖ್ಯೆ 07340 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 5ರ ವರೆಗೆ (ಒಟ್ಟು 07 ಟ್ರಿಪ್‌ಗಳು) ಚಾಮರಾಜನಗರದಿಂದ ಹೊರಡಲಿದೆ.
ಹುಬ್ಬಳ್ಳಿ – ಯಶವಂತಪುರ – ಹುಬ್ಬಳ್ಳಿ ನಡುವಿನ ವೇಳಾಪಟ್ಟಿ ಬದಲಾವಣೆ ಇಲ್ಲ: ಹುಬ್ಬಳ್ಳಿ- ಯಶವಂತಪುರ – ಹುಬ್ಬಳ್ಳಿ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬೆಂಗಳೂರಿನ ನಂತರ, ರೈಲು ಸಂಖ್ಯೆ 07339 ಕೆಎಸ್ಆರ್ ಬೆಂಗಳೂರಿನಿಂದ ಬೆಳಿಗ್ಗೆ 07:00 ಗಂಟೆಗೆ ಹೊರಟು ಮಧ್ಯಾಹ್ನ 12:15ಕ್ಕೆ ಚಾಮರಾಜನಗರ ತಲುಪಲಿದೆ.
ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 07340 ಚಾಮರಾಜನಗರದಿಂದ ಸಂಜೆ 06:45ಕ್ಕೆ ಹೊರಟು ರಾತ್ರಿ 11:45ಕ್ಕೆ ಕೆಎಸ್ಆರ್ ಬೆಂಗಳೂರಿಗೆ ಆಗಮಿಸಲಿದೆ.
ವಿಸ್ತೃತ ಭಾಗದಲ್ಲಿ, ಎರಡೂ ರೈಲುಗಳು ಕೆಂಗೇರಿ, ರಾಮನಗರಂ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಪಾಂಡವಪುರ, ಮೈಸೂರು, ಚಾಮರಾಜಪುರಂ, ಅಶೋಕಪುರಂ, ಕಡಕೋಳ, ತಾಂಡವಪುರ ಹಾಲ್ಟ್, ಸುಜಾತಪುರಂ ಹಾಲ್ಟ್ ಮತ್ತು ನಂಜನಗೂಡು ಟೌನ್ ನಿಲ್ದಾಣಗಳಲ್ಲಿ ನಿಲ್ಲಲಿವೆ.