ಲಕ್ಕುಂಡಿ ಉತ್ಖನನದ ವೇಳೆ ಶಿವಲಿಂಗ ಪತ್ತೆ, ಸರ್ಪವೂ ಪ್ರತ್ಯಕ್ಷ

0
4

ಗದಗ: ಲಕ್ಕುಂಡಿ ಗ್ರಾಮದಲ್ಲಿ ಮೂರನೇ ದಿನದ ಉತ್ಖನನದ ವೇಳೆಗೆ ಪ್ರಾಚೀನ ಅಪರೂಪದ ಶಿವಲಿಂಗ, ಗಂಟೆ, ಹಲಗಾರತಿ ಸಿಕ್ಕಿದೆ.

ಆಳದಲ್ಲಿ ಮಣ್ಣಿನಲ್ಲಿ ಹೂತಿದ್ದಿದ್ದರಿಂದ ಶಿವಲಿಂಗ ಕಪ್ಪಾಗಿದೆ. ಪುರಾತತ್ವ ಇಲಾಖೆಯು ಶಿವಲಿಂಗದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಇದು ಯಾವ ಕಾಲಕ್ಕೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟಪಡಿಸಬೇಕಾಗಿದೆ.

ದಿ. 10ರಂದು ಮನೆಯ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ನಿಧಿ ದೊರೆತ ಜಾಗದ ಹತ್ತಿರವೇ ಈ ಶಿವಲಿಂಗ, ಚಿಕ್ಕ ತಾಮ್ರದ ಗಂಟೆ, ದೇವರ ಆರತಿ ತಟ್ಟೆ ದೊರೆತಿದೆ.

ಇದನ್ನೂ ಓದಿ: ನಾನು ಮುಂದಿನ ಚುನಾವಣೆಯ ಸಿಎಂ ಆಕಾಂಕ್ಷಿ

ಅಚ್ಚರಿಯೆಂಬಂತೆ ಅಗೆಯುವಾಗ ಹಾವೊಂದು ಸಹ ಪ್ರತ್ಯಕ್ಷವಾಗಿ ಕಾರ್ಮಿಕರನ್ನು ಬೆಚ್ಚಿಬೀಳಿಸಿತು. ನಿಧಿಯನ್ನು ಸರ್ಪ ಕಾಯುತ್ತಿದೆಯೆಂಬ ಗ್ರಾಮಸ್ಥರ ನಂಬಿಕೆ ಇನ್ನಷ್ಟು ಬಲವಾಯಿತು.

ಲಕ್ಕುಂಡಿ ಗ್ರಾಮದಲ್ಲಿ ಮಳೆಗಾಲದಲ್ಲಿ ಮಣ್ಣು ಅಗೆಯುವಾಗ ಚಿನ್ನದ ತುಣುಕು, ಹವಳ ದೊರೆಯುತ್ತಿದ್ದವು. ಗ್ರಾಮದ ಯಾವುದೇ ಭಾಗದಲ್ಲಿ ಅಗೆದರೂ ಚಿನ್ನ ದೊರೆಯತ್ತಿತ್ತು. ಆದರೆ ನಿಧಿ ಹಿಂದೆ ಹೋದವರು ರಕ್ತಕಾರಿ ಸತ್ತಿದ್ದಾರೆಂಬುದು ಗ್ರಾಮಸ್ಥರ ಅಂಬೋಣ. ಅಗೆಯುವಾಗ ಹಾವು ನೋಡಿ ಜೆಸಿಬಿ ಚಾಲಕ ಗಾಬರಿಯಿಂದ ಹೆದರಿದ್ದಾರೆ.

Previous articleಭದ್ರಾ ಎಡ ದಂಡೆ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ