Home Advertisement
Home ನಮ್ಮ ಜಿಲ್ಲೆ ಗದಗ ಲಕ್ಕುಂಡಿ ನಿಧಿಗೆ ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಇತಿಹಾಸ..!

ಲಕ್ಕುಂಡಿ ನಿಧಿಗೆ ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಇತಿಹಾಸ..!

0
101

ಗದಗ: ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವಾಗ ದೊರೆತ ಚಿನ್ನಾಭರಣಗಳು ವಿಜಯನಗರ ಸಾಮ್ರಾಜ್ಯದ ಸಮಕಾಲಿನ ಅವಧಿಗೆ ಸೇರಿದ್ದಾಗಿರಬಹುದೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿದ್ದಾರೆ.

ಪುರಾತತ್ವ ಇಲಾಖೆಯ ನಿರ್ದೇಶಕಿ ಡಾ. ಸ್ಮಿತಾ ರೆಡ್ಡಿ, ಎಂಜಿನೀಯರ್ ಸುವರ್ಣ, ಉಪನಿರ್ದೇಶಕ ಡಾ. ರಾಜಾರಾಮ, ಇತಿಹಾಸ ತಜ್ಞ ಡಾ. ದತ್ತಪ್ರಸನ್ನ ಪಾಟೀಲ, ಆರ್. ಷಡಕ್ಷರಯ್ಯ ಇತರರೊಂದಿಗೆ ಸುದೀರ್ಘ ಮೂರು ಗಂಟೆಗಳ ಕಾಲ ಪರಿಶೀಲನೆ ಮಾಡಲಾಗಿದೆ ಎಂದು ಅವರು ತಿಳಿದರು.

ಲಕ್ಕುಂಡಿಯಲ್ಲಿ ದೊರೆತಿರುವ ಚಿನ್ನದಾಭರಣಗಳ ಪರಿಶೀಲನೆಯ ಸಂದರ್ಭದಲ್ಲಿ ಒಡವೆಗಳು ಬಳಕೆ ಮಾಡಿರಬಹುದೆಂಬ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿವೆ. ಇನ್ನೂ ಎರಡು ಮೂರು ದಿನದಲ್ಲಿ ತಜ್ಞರು ಸ್ಪಷ್ಟ ವರದಿ ಕೊಡಲಿದ್ದಾರೆ. ಒಡವೆಗಳನ್ನು ರಾಜ ಮಹಾರಾಜರು ಬಳಸಿದ್ದೆಂದು ಖಚಿತವಾಗಿ ಹೇಳಲಾಗುವುದಿಲ್ಲ. ಯಾರೋ ಉಳ್ಳವರು ಬಳಸಿರಬಹುದು. ಕೆಲ ದಿನಗಳಲ್ಲಿ ವರದಿ ಜಿಲ್ಲಾಡಳಿತದ ಕೈ ಸೇರಿದಾಗ ಚಿನ್ನ ನಿಧಿಯೆಂದು ಅಂತಾ ಘೋಷಣೆಯಾಗಲಿದೆ.

ಇದನ್ನೂ ಓದಿ: ಇರಾನ್‌ ಕರೆನ್ಸಿ ಭಾರೀ ಕುಸಿತ: 1 ಡಾಲರ್‌ 10,92,500 ರಿಯಾಲ್‌ಗೆ ಸಮ

ದೊರೆತಿರುವ ಚಿನ್ನಾಭರಣಗಳಿಗೆ ಯಾರಾದರೂ ತಮಗೆ ನೀಡುವಂತೆ ಬೇಡಿಕೆ ಮಂಡಿಸಿದಲ್ಲಿ ದಿಕ್ಕು ಬದಲಾಗುತ್ತದೆ. ದೊರೆತಿರುವ ಚಿನ್ನಾಭರಣಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಲಿದೆ. ಕಸ್ತೂರಿ ರಿತ್ತಿ ಕುಟುಂಬಕ್ಕೆ ನಿವೇಶನ ನೀಡಿ ಮನೆಕಟ್ಟಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು.

ರಿತ್ತಿ ಕುಟುಂಬಕ್ಕೆ ಬಂಪರ್ ಕೊಡುಗೆ ಕೊಡೋದಕ್ಕೆ ಸರ್ಕಾರದ ಚಿಂತನೆ ನಡೆಸಿದೆ. ಕುಟುಂಬದ ಸದಸ್ಯರು ಉದ್ಯೋಗ ಕೇಳಿದ್ದಾರೆ. ಕಸ್ತೂರೆವ್ವಗೆ ಹೊರಗುತ್ತಿಗೆ ಕೆಲಸ ನೀಡಲು ಉದ್ದೇಶಿಸಲಾಗಿದೆ. ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವ ನಿಧಿ ಸುಮಾರು 300 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ. ಅಂದಿನ ಕಾಲದ ಮೂರು-ನಾಲ್ಕು ರಾಜಮನೆತನಗಳ ಆಳ್ವಿಕೆಗೆ ಸಂಬಂಧಿಸಿರಬಹುದು. ಪತ್ತೆಯಾದ ಆಭರಣಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಇವುಗಳನ್ನು ಯಾರೋ ದಷ್ಟಪುಷ್ಟವಾಗಿರುವ ಶ್ರೀಮಂತ ವ್ಯಕ್ತಿಗಳು ಧರಿಸಿರಬೇಕೆಂದು ಅಂದಾಜಿಸಲಾಗಿದೆಯೆಂದು ವಿವರಿಸಿದರು.