Home Advertisement
Home ನಮ್ಮ ಜಿಲ್ಲೆ ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಇನ್ನಿಲ್ಲ

ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಇನ್ನಿಲ್ಲ

0
21

ಬೆಂಗಳೂರು: ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಎಸ್. ಮಂಗಳರಾಜ್ (84) ನಿಧನರಾದರು.

ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ. 60ರ ದಶಕದಲ್ಲಿ ರಾಜ್ಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು.

ಎಚ್‌ಎಎಲ್‌ನಲ್ಲಿ ವೃತ್ತಿಜೀವನ ಸಾಗಿಸಿ ನಿವೃತ್ತಿ ಬಳಿಕವೂ ರಾಜ್ಯ ಮಹಿಳಾ ಹಾಕಿ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.

ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಉಪಾಧ್ಯಕ್ಷ ಎಸ್. ನಿಕೋಲಸ್ ಅವರು ಮಂಗಳರಾಜ್ ಅವರ ಹಿರಿಯ ಸಹೋದರರಾಗಿದ್ದಾರೆ.