ತುರ್ತು ಪರಿಸ್ಥಿತಿಯ ನಂತರ ದೇಶ ಮತ್ತೊಮ್ಮೆ ಆತಂಕದಲ್ಲಿ

0
33

ಧಾರವಾಡ: ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಿಗೆ ದೇಶದಲ್ಲಿ ಗೌರವದ ಸ್ಥಾನ ಸಿಗುವಂತೆ ಮಾಡಿದ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ ಭೂಷಣ ಅವರಿಗೆ ಮತ್ತೊಬ್ಬ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೆಸರಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಕೊಡಮಾಡುವ ಚೊಚ್ಚಲ “ಮಹಾಸಂಗ್ರಾಮಿ ಎಸ್.ಆರ್. ಹಿರೇಮಠ ಸಮಾಜ ಪರಿವರ್ತನ ಪುರಸ್ಕಾರ’ ಪ್ರದಾನ ಮಾಡಲಾಯಿತು. ಪುರಸ್ಕಾರ 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಹೊಂದಿದೆ.

ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಪ್ರಶಾಂತ ಭೂಷಣ, ದೇಶದಲ್ಲಿ ಪ್ರಜಾಪ್ರಭುತ್ವ ಆತಂಕದಲ್ಲಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ ಇದನ್ನು ಖಂಡಿಸಿ ದೇಶವ್ಯಾಪಿ ಜನಪರ ಹೋರಾಟ ಸಂಘಟಿಸುವುದು ಅವಶ್ಯಕವಾಗಿದೆ ಎಂದರು.+

ಇದನ್ನೂ ಓದಿ: ಮಹಾತ್ಮ ಗಾಂಧೀಜಿ ವಿರೋಧಿ ಕೈಲಿ ಚರಕ

ತುರ್ತು ಪರಿಸ್ಥಿತಿ ನಂತರ ದೇಶ ಮತ್ತೊಮ್ಮೆ ಆತಂಕದಲ್ಲಿದೆ. ಚುನಾವಣಾ ಆಯೋಗವನ್ನು ಶಿಥಿಲಗೊಳಿಸಿ ಅದನ್ನು ಸರಕಾರದ ಪರ ಮಾತನಾಡುವ ಗಿಳಿಯಾಗಿ ಪರಿವರ್ತಿಸಲಾಗಿದೆ. ಮನರೇಗಾ ಹೆಸರನ್ನು ಜಿರಾಮ್‌ಜಿ ಎಂದು ಕೇವಲ ಹೆಸರು ಬದಲಿಸಿಲ್ಲ. ಅದರ ರೂಪವನ್ನೇ ಬದಲಿಸಲಾಗಿದ್ದು, ಉದ್ಯೋಗ ಖಾತ್ರಿಯನ್ನೇ ರದ್ದುಪಡಿಸಲಾಗಿದೆ. ದೃಶ್ಯ ಮಾಧ್ಯಮಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸಲಾಗುತ್ತಿದೆ. ಇದು ಮುಂದೆ ಭೀಕರ ಪರಿಣಾಮ ಬೀರಲಿದ್ದು, ಇದರ ವಿರುದ್ಧ ಜನರು ಧ್ವನಿ ಎತ್ತಬೇಕು. ಹೋರಾಟ ಮಾಡುವ ಸಂಘಟನೆಗಳನ್ನು ಬೆಂಬಲಿಸಬೇಕಿದೆ ಎಂದು ಕರೆ ನೀಡಿದರು.

ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಮಾತನಾಡಿ, ದುರಾಸೆಗೆ ಮಿತಿ ಇರದಿದ್ದರಿಂದ ಒಂದು ರಾಜ್ಯದ ಬಜೆಟ್ ಮೌಲ್ಯದ ಹಗರಣಗಳು ನಡೆಯುತ್ತಿವೆ. ದೇಶದ ಪ್ರಗತಿಯೊಂದಿಗೆ ದುರಾಸೆಯೂ ಪ್ರಗತಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

Previous articleಖ್ಯಾತ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ನಿಧನ