ಕವಿವಿ ಪ್ರೊಫೆಸರ್‌ ನಾಟೀಕರಗೆ ಲೋಕಾ ಶಾಕ್

0
71

ಧಾರವಾಡ: ತಮ್ಮನ ಮಗನ ಮದುವೆಗೆ ಹೊರಟಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಸುಭಾಷಚಂದ್ರ ನಾಟಿಕರ್ ಅವರಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದಾರೆ.

ನಾಟೀಕರ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಕವಿವಿ ಅಂಬೇಡ್ಕರ್ ಸ್ಟಡೀಸ್ ಸಂಯೋಜಕರೂ ಆಗಿದ್ದಾರೆ. ಧಾರವಾಡದ ಶೆಟ್ಟರ್ ಕಾಲೊನಿಯಲ್ಲಿ ಮನೆ ಹೊಂದಿರುವ ನಾಟೀಕರ್ ಅವರು, ತಮ್ಮ ಸಹೋದರನ ಮಗನ ಮದುವೆಗೆಂದು ಹೊರಟಿದ್ದರು. ಇವರ ಮನೆಗೆ ಅತಿಥಿಗಳೂ ಆಗಮಿಸಿದ್ದರು. ಇದೇ ವೇಳೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಕವಿವಿ ಸಮಾಜಶಾಸ್ತ್ರ ವಿಭಾಗ, ಅಂಬೇಡ್ಕರ್ ಸ್ಟಡೀಸ್ ವಿಭಾಗದ ಮೇಲೂ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

Previous articleರಾಜ್ಯದ ಹತ್ತು ಜಿಲ್ಲೆಗಳಲ್ಲಿ ಲೋಕಾಯುಕ್ತ ಬಿರುಸಿನ ದಾಳಿ
Next articleಕರ್ನಾಟಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮಾರ್ಟಿನ್-ಬೇಕರ್‌ಗೆ ಆಹ್ವಾನ

LEAVE A REPLY

Please enter your comment!
Please enter your name here